ಹೆಜಮಾಡಿ; 79ನೇ ಸ್ವಾತಂತ್ರೋತ್ಸವ ಆಚರಣೆ

0
97

ಹೆಜಮಾಡಿ: ಜೈ ಕರ್ನಾಟಕ ಯುವ ಸಂಸ್ಥೆ, ಜೈ ಕರ್ನಾಟಕ ಯುವತಿ ಮಹಿಳಾ ಮಂಡಳಿ, ಹೆಜಮಾಡಿ ಇದರ ಜಂಟಿ ಆಶ್ರಯದಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಬೋದ್ ಚಂದ್ರ ಹೆಜಮಾಡಿ ವಹಿಸಿದ್ದರು. ದ್ವಜರೋಹಣವನ್ನು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆಯ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ ಇವರು ನೆರವೇರಿಸಿ ಜನರು ರಾಷ್ಟ್ರ ಪ್ರೇಮವನ್ನು ಮೈಗೂಡಿಸಿ ಶಾಂತಿ ಸಾಮರಸ್ಯದಿಂದ ಬದುಕಬೇಕೆಂದು ಕರೆಯಿತ್ತರು. ಇದೇ ಸಂದರ್ಭದಲ್ಲಿ ಹೆಜಮಾಡಿಯ ಬ್ರಹ್ಮ ಲಿಂಗೇಶ್ವರ ಅಬ್ಬಗ ದಾರಗ ಆಲಡೆಯ ಸಮಗ್ರ ಜೀರ್ಣೋದ್ದಾರ ಕ್ಕೆ ರೂ. 25,000 ದೇಣಿಗೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು. ಸಮಾರಂಭದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶಾರದಾ ಎಸ್ ಬಂಗೇರ, ಯುವತಿ ಮಂಡಲದ ಅಧ್ಯಕ್ಷೆ ವಿಮಲಾ ದಯಾನಂದ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಉಪಾಧ್ಯಕ್ಷ ಶರತ್ ಕುಮಾರ್, ಅಮಿತ, ಮನೋಹರ್ ಹೆಜಮಾಡಿ, ಸಂದೀಪ್. ಆರ್ ಸುವರ್ಣ, ಕಿರಣ್ ಕುಮಾರ್, ಭರತೇಶ್ ಕುಮಾರ್, ಮಿಥುನ್ ಸುವರ್ಣ, ಮುಂತಾದವರು ಉಪ್ಥಿತರಿದ್ದರು.

LEAVE A REPLY

Please enter your comment!
Please enter your name here