ಸಜೀಪ ಮಾಗಣೆ ಶ್ರೀ ಮಿತ್ತ ಮಜಲು ಕ್ಷೇತ್ರದ ಐದು ದಿನಗಳ ವಾರ್ಷಿಕ ಬಿಸು ಜಾತ್ರೆ ಪರಿವಾರ ದೈವಗಳ ನೇಮದೊಂದಿಗೆ ಸಂಪನ್ನಗೊಂಡಿತು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪಾಲೆ ಮಂಟಮೆ ಸಂಸಾರ,ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬೀಜ oದಾರು ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ನೂತನ ಗಡಿಪ್ರದಾನ ರಾಧಮುತ್ತಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ. ಮಾಡ ದಾರು ಗುತ್ತು ಶಶಿಧರ ರೈ ಯಾನೆ ನಾರ್ನ ಆಳ್ವ, ಜೀವನ್ ಆಳ್ವ, ಹರೀಶ್ ರೈ, ಶ್ರೀಕಾಂತ ಶೆಟ್ಟಿ ಸಂಕೇಶ ದೇವಿ ಪ್ರಸಾದ್ ಪೂಂಜ ಶಿವಪ್ರಸಾದ್ ಶೆಟ್ಟಿ ಕೆ ಮೊದಲಾದವರು ಉಪಸ್ಥಿತರಿದ್ದರು ಬಂದಂತ ಎಲ್ಲಾ ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
