ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಸಜೀಪ ಮೂಡ ಲಕ್ಷ ಜಪ ಯಜ್ಞ ದೂರ್ವ ಹೋಮ ನಿಮಿತ್ತ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಯಮಿ ಎಂ ಮಹಾಬಲ ಕೊಟ್ಟಾರಿ ಅಧ್ಯಕ್ಷತೆಯಲ್ಲಿ ಜರಗಿತು. ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಭಯಂಕೇಶ್ವರ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘುನಾಥ ಸೋಮಾಯಾಜಿ ಉದ್ಘಾಟಿಸಿದರು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಬಾಲ ಗಣಪತಿ ದೇವಸ್ಥಾನ ನಾಡಿನ ಹೆಮ್ಮೆಯ ಧಾರ್ಮಿಕ ಶ್ರದ್ಧಾ ಕೇಂದ್ರ ವಾಗಿ ಬೆಳೆಯಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿದೇರಾಜಿ ಅರ್ಚಕರಿಗೆ ಹಾಗೂ ಭಕ್ತರಿಗೆ ಒಳಕೊಳ್ಳಲು ವಸತಿಗೃಹದ ನಿರ್ಮಾಣಕ್ಕೆ ಎಲ್ಲರ ಸಹಕಾರ ನೀಡುವಂತೆ ವಿನಂತಿಸಿದರು. ಯಾಗ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಪ್ರಮುಖರಾದ ಮಾಜಿ ಸಚಿವ ಬಿ ರಮನಾಥ ರೈ.ಪದ್ಮರಾಜ ಆರ್ ಪೂಜಾರಿ,ಜಗದೀಶ ಆಳ್ವ. ಆರ್ ಚೆನ್ನಪ್ಪ ಕೋಟ್ಯಾನ್., ಸಚಿನ್ ಕುಮಾರ್, ಉದ್ಯಮಿ ಕೀರ್ತನ್, ಸಂತೋಷ್ ಕುಮಾರ್ ರೈ ಬೋಳಿಯಾರು, ರವೀಂದ್ರ ಕಂಬಳಿ ,ಶೋಭಾ ಶೆಟ್ಟಿ. ಸುನೀತಾ ಶೆಟ್ಟಿ, ಜಯಾನಂದ ಪಿ, ಪುರಂದರ ಆರ್ಯ ಪು. ಗಣೇಶ್ ಶಾಲಿಯಾನ್, ಸಂಜೀವ ಪೂಜಾರಿ ಗುರು ಮಂದಿರ ವಿಕ್ರಂ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

