ಜೇಸಿಐ ಭಾರತದ ನಿರ್ದೇಶನದಂತೆ ಜೇಸಿ ಸಪ್ತಾಹ 2026 ಅನ್ನು ಅತ್ಯಂತ ವಿಜೃಂಭಣೆಯಿಂದ ನೆರೆವೇರಿಸಿದ ವಲಯ 15ರ ಜೇಸಿಐ ಕಾಪು ಘಟಕ ಉನ್ನತವಾಗಿ ಗುರುತಿಸಿಕೊಂಡು ಜೇಸಿಐ ಭಾರತದ ವಲಯ 15ರ ಏಕೈಕ ಘಟಕವಾಗಿ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.
ದಿ 777 ಜೇಸಿಐ ವೀಕ್ ಅನ್ನುವ ಹೆಸರಿನೊಂದಿಗೆ ರಾಷ್ಟ್ರಧ್ಯಕ್ಷ RPP ಭರತ್ ಎನ್. ಆಚಾರ್ಯ ನೇತೃತ್ವದಲ್ಲಿ ಭಾರತದಾದ್ಯಂತ ಈ ಬಾರಿಯ ಜೇಸಿ ಸಪ್ತಾಹ ನೆರೆವೆರಿದ್ದು, 7 ದಿನಗಳಿಗೆ 7 ಕಾರ್ಯಕ್ರಮಗಳ ಕಾರ್ಯಸೂಚಿಯನ್ನು ಹೊರಡಿಸಲಾಗಿತ್ತು, ಅದರಂತೆ ಸೆಪ್ಟೆಂಬರ್ 9 ರಿಂದ 15ರ ವರೆಗೆ ಕಾಪು ಘಟಕ ಮಾಡಿರುವ ಜೇಸಿ ಸಪ್ತಾಹ ಕಾಪುವಿನಲ್ಲಿ ಮಾತ್ರವಲ್ಲದೆ, ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತದೆ.
ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ತಂಡದ ಪರಿಶ್ರಮಕ್ಕೆ ಈ ಮುಖೇನ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

