ಕಾರ್ಕಳ: ಕಾರ್ಕಳ ಸಮೀಪ ಸಾಣೂರು ಗ್ರಾಮದ ನಿವಾಸಿಯೊಬ್ಬರು ನಾಪತ್ತೆಯಾದ ಘಟಕ ನಡೆದಿದೆ. ನಾಪತ್ತೆಯಾದ ವ್ಯಕ್ತಿ ಪ್ರಶಾಂತ ಎಂದು ತಿಳಿದು ಬಂದಿದೆ.
ಶ್ರೀಮತಿ ದೀಪಿಕಾ ಅವರ ಗಂಡ ಪ್ರಶಾಂತ ಎಂಬವರು ದಿನಾಂಕ 05.11.2025 ರಂದು ಬೆಳಿಗ್ಗೆ 8:30 ಗಂಟೆಗೆ ಆತನ ವಾಸದ ಮನೆಯಾದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪವಮಾನ ನಿವಾಸ ಎಂಬಲ್ಲಿಂದ ಕೆಎ-19 ಎಮ್‌ಇ-7879 ನೇ ನಂಬ್ರದ ಕಾರಿನಲ್ಲಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್ ಕರೆ ಸಹ ಸ್ವೀಕರಿಸದೇ ಕಾಣೆಯಾಗಿದ್ದಾರೆ.
ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

