ಅಪಘಾತದಲ್ಲಿ ಸಾವನಪ್ಪಿದ ವಂಶಿ ಜಿ. ಶೆಟ್ಟಿ ವಿದ್ಯಾರ್ಥಿ ಪರಿಹಾರ ಒದಗಿಸಲು ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ಮನವಿ

0
342

ಇತ್ತೀಚಿಗೆ ಬ್ರಹ್ಮಾವರ NH-66 ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ಸಾವನಪ್ಪಿದ ವಂಶಿ ಜಿ. ಶೆಟ್ಟಿ ವಿದ್ಯಾರ್ಥಿಗೆ ಸಂಬಂದ ಪಟ್ಟ ಇಲಾಖೆಯಿಂದ ಪರಿಹಾರ ಒದಗಿಸುವುದು ಮತ್ತು ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೈಓವರ್ ನಿರ್ಮಾಣ ಮಾಡುವಂತೆ ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ಮನವಿ.


ಉಡುಪಿ :- ಉಡುಪಿ ಜಿಲ್ಲೆಯ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ರಸ್ತೆದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು ಈ ಬಗ್ಗೆ ಈಗಾಗಲೇ ಪೈಓವರ್ ನಿರ್ಮಿಸುವಂತೆ ಪ್ರತಿಭಟನೆ ಹಾಗೂ ಮನವಿಯನ್ನು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ವತಿಯಿಂದ ಮವವಿ ಸಲ್ಲಿಸಿದ್ದು.. ಈ ವಿಚಾರವಾಗಿ ಯಾರೂ ಕೂಡ ಗಮನ ಹರಿಸದಿದ್ದದ್ದು ಬೇಸರ ಸಂಗತಿಯಾಗಿದೆ. ಆಭಾಗದಲ್ಲಿ ದಿನೇ ದಿನೇ ಅಪಘಾತಗಳು ಜಾಸ್ತಿಯಾಗುತ್ತಿದ್ದು ದಿನಾಂಕ: 01-04-2025ರಲ್ಲಿ ಬೆಳಿಗ್ಗೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲೆಗೆ ಹೋಗುವ ಸಂದರ್ಭದಲ್ಲಿ ರಸ್ತೆದಾಟುವಾಗ ಬ್ರಹ್ಮಾವರ ಎಸ್.ಎಂ.ಎಸ್ ಆಂಗ್ಲ ಮಾದ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ವಂಶಿ ಜಿ. ಶೆಟ್ಟಿ ಎಂಬ ಬಾಲಕನು ಅಪಘಾತದಲ್ಲಿ ಸಾವನಪ್ಪಿದ್ದು ಈ ಬಾಲಕನ ಕುಟುಂಬದವರಿಗೆ ಯಾವುದೇ ಪರಿಹಾರ ನೀಡದಿರುವುದರಿಂದ ಈ ಕೂಡಲೆ ಜಿಲ್ಲಾಡಳಿತ ಮತ್ತು ಸಂಬಂದ ಪಟ್ಟ ಇಲಾಖೆಯಿಂದ ಪರಿಹಾರ ಒದಗಿಸಿ ಕೊಡುವಂತೆ ಹಾಗೂ ಆ ಭಾಗದಲ್ಲಿ ಪೈಓವರ್ ನಿರ್ಮಿಸುವಂತೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಯವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಈ ವಿಚಾರದಲ್ಲಿ ತಕ್ಷಣವೇ ಕ್ರಮ ಕೃೆಗೂಳ್ಳುತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಸ್ಥಾಪಕ ಶಿವ ಕುಮಾರ್ ಕರ್ಜೆ , ಗೌರವ ಸಲಹೆಗಾರ ವಿಶ್ವಾಸ್ ಅಮೀನ್ , ಸಂತೋಷ್ ಪಡುಬಿದ್ರಿ, ಉಡುಪಿ ತಾಲೂಕು ಅಧ್ಯಕ್ಷ ವಿದಿತ್ ನಾಗರಾಜ್, ಉಪಾಧ್ಯಕ್ಷ ಮನೀಷ್ ಪೂಜಾರಿ, ಕಾಲೇಜು ವಿದ್ಯಾರ್ಥಿಗಳಾದ ವಂಶಿತ್ ಶೆಟ್ಟಿ , ಕಿರಣ್ ಶೆಟ್ಟಿ , ಧನುಷ್ ಅಚಾರ್ಯ , ಸೌರಭ್ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here