ಸಜೀಪ ಮಾಗಣೆ ನಗ್ರೀ ಮಾಡ ಪುನ ಪ್ರತಿಷ್ಠೆ ಅಂಗವಾಗಿ ಪುಣ್ಯಹ ಪಂಚಗವ್ಯ ದೇವತಾ ಪ್ರಾರ್ಥನೆ ವಾಸ್ತು ರಕ್ಷಾ ಹೋಮ ವಾಸ್ತು ಬಲಿ ಅಧಿವಾಸ ಗಣಪತಿ ಹೋಮ ಪ್ರತಿಷ್ಠ ಪ್ರಧಾನ ಹೋಮ ಆ ನಿತ್ಯ ಕಲಶಾಭಿಷೇಕ ಪರ್ವ ಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ಪಾಲೆ ಮಂಟಮೆ ಸಂಸಾರ ಸಂಕಪ್ಪ ಶೆಟ್ಟಿ, ಗಡಿಪ್ರದಾನ ರಾಧ ಕಾಂತಾಡಿ ಗುತ್ತು ಗಣೇಶ ನಾಯಕ್ ಯಾನೆ ಗಣೇಶ್ ಶೆಟ್ಟಿ, ಮಾಡ ದಾರು ಗುತ್ತು ಶಶಿಧರ ರೈ ಯಾನೆ ನಾರ್ನ ಆಳ್ವ, ಸಜೀಪ ಗುತ್ತು ತಿಮ್ಮಪ್ಪ ಶೆಟ್ಟಿ, ನಗ್ರೀ ಗುತ್ತು ಜಯರಾಮ ಶೆಟ್ಟಿ, ನಗ್ರಿ ಗುತ್ತು ವಿವೇಕ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ದೇವಿಪ್ರಸಾದ್ ಪೂಂಜ, ಮಾಲಾಡಿ ಅಜಿತ್ ಕುಮಾರ್ ರೈ, ಕೋಚ್ ಪೂಜಾರಿ ಯಾನೆ ಶಂಕರ ಪೂಜಾರಿ, ದಯಾನಂದ ಪೂಜಾರಿ ಯಾನೆ ಕುoಜ್ಞ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಬಂದಂತ ಎಲ್ಲಾ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಸಜೀಪ ಮಾಗಣೆ: ಗಣಪತಿ ಹೋಮ ಪ್ರತಿಷ್ಠ ಪ್ರಧಾನ ಹೋಮ ಆ ನಿತ್ಯ ಕಲಶಾಭಿಷೇಕ ಪರ್ವ ಸೇವೆ
RELATED ARTICLES