ಕನ್ನಡ ಭವನ ಮತ್ತು ಗ್ರಂಥಾಲಯ(ರಿ) ಕನ್ನಡ ಭವನ ಪ್ರಕಾಶನ ಕಾಸರಗೋಡು. ಕನ್ನಡ ಭವನದ ರಜತ ಸಂಭ್ರಮ ನಾಡು ನುಡಿ ಹಬ್ಬ 2026 ಇದರ ಪ್ರಯುಕ್ತ ನೀಡಲಾಗುವ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್ 2026″ ಕವಿ ಯುವ ಸಾಹಿತಿ ಸತೀಶ್ ಬಿಳಿಯೂರು ಇವರ ಸಾಹಿತ್ಯ ಕ್ಷೇತ್ರದ ಸಾಧನೆ ಮತ್ತು ಕನ್ನಡ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಜನವರಿ 18ರಂದು ಕಾಸರಗೋಡು ಕನ್ನಡ ಭವನ ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಗೌರವಪೂರ್ವಕವಾಗಿ ನೀಡಿ ಗೌರವಿಸಲಾಯಿತು.ಇವರ ” ನನ್ನೆದೆ ಸಪ್ಪಳ” ಹಾಗೂ “ಭಾವದೆಲೆ ಮೇಲಿನ ಇಬ್ಬನಿ “ಎಂಬ ಎರಡು ಕೃತಿಗಳು ಲೋಕಾರ್ಪಣೆಗೊಂಡಿದ್ದು. ಹಲವಾರೂ ಬರಹಗಳು ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

