ಕಾಸರಗೋಡಿನಲ್ಲಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಕನ್ನಡ ಯಾತ್ರೆ

0
24

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಕರ್ನಾಟಕ -ಕಾಸರಗೋಡು ಕನ್ನಡ ಯಾತ್ರೆ ಅಭಿಯಾನ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ನೇತೃತ್ವದಲ್ಲಿ ಕಾಸರಗೋಡು ಪ್ರದೇಶದಲ್ಲಿ ಕಳೆದ ಏಳು ದಿನಗಳಿಂದ ಶಾಲೆಗಳಲ್ಲಿ, ವಿವಿಧ ಕನ್ನಡ ಮುಖಂಡರ ಭೇಟಿ ಚರ್ಚೆಯೊಂದಿಗೆ ನಡೆಯುತ್ತಿದೆ.

ಸಕಾರಾತ್ಮಕ ಈ ಕಾರ್ಯಕ್ರಮ ದಲ್ಲಿ “ಕನ್ನಡದ ನಡಿಗೆ -ಶಾಲೆಯ ಕಡೆಗೆ “ಕಾರ್ಯಕ್ರಮ ದ ರೂವಾರಿ, ಕನ್ನಡ ಭವನ, ಕನ್ನಡ ಚು. ಸಾ. ಪ. ಕೇಂದ್ರ ಸಮಿತಿ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಸಂಪೂರ್ಣ ಸಹಕಾರದಲ್ಲಿ ನಡೆಯುತ್ತಿದೆ.

ಉಸೈನ್ ಪೆರಾಜೆ ಯವರ ಕನ್ನಡ ಶಾಲೆ ಉಳಿಸುವ, ಕಾಳಜಿಗೆ ಜೈ ಎಂದಿದ್ದಾರೆ, ಸಂಪೂರ್ಣ ಸಹಕಾರ ಘೋಷಿಸಿ ಕೈ ಜೋಡಿಸಿದ್ದಾರೆ.ಉನೈಸ್ ಪೆರಾಜೆ ಯವರ ಕನ್ನಡ ಶಾಲೆ ಉಳಿಸಿ ಅಭಿಯಾನದ ಒಂಬತ್ತನೇ ದಿನ ಗುರುವಾರ 24.ರ ಸಂಜೆ 4.30 ಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ಅಭಿಯಾನದ ಕಾಸರಗೋಡು ಸಮಾವೇಶ ನಡೆಯಲಿದೆ.

ಕನ್ನಡ ಶಾಲೆಗಳು ಉಳಿಯಬೇಕು -ಕನ್ನಡ ಕಾಸರಗೋಡಿನಲ್ಲಿ ಚಿರಕಾಲ ಬಾಳಬೇಕು ಎಂಬ ಚಿಂತನವಿರುವ ಕನ್ನಡ ಸುಮನಸ್ಸುಗಳು ಗುರುವಾರ ಸಂಜೆ 4.30.ಗೆ ಕಾಸರಗೋಡು ಕನ್ನಡ ಭವನ ವೇದಿಕೆಯಲ್ಲಿ ನಡೆಯುವ “ಕನ್ನಡ ಶಾಲೆಗಳ ಉಳಿವು -ಕನ್ನಡ ಭಾಷೆಯ ಉಳಿವು “ವಿಷಯದಲ್ಲಿ ನಡೆಯುವ “ಚಿಂತನ ಮಂಥನ “ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ “ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.