ಮುಲ್ಕಿನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಜರಗಿತು ಈ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಮಾತನಾಡಿ ಸ್ಪರ್ಧಾತ್ಮಕ ಯುಗ ದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರಸುಸಲು ಈ ತರಹದ ವಿಜ್ಞಾನ ವಸ್ತು ಪ್ರದರ್ಶನಗಳು ತುಂಬಾ ಸಹಕಾರಿ ನಾರಾಯಣಗುರು ವಿದ್ಯಾ ಸಂಸ್ಥೆ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಪ್ರತಿಭೆಯನ್ನು ಹೊರ ತರಲು ಸಹಕರಿಸುತ್ತಿದೆ ಇಂತಹ ಕಾರ್ಯಕ್ರಮಗಳು ಇನ್ನು ಮುಂದೆಯೂ ಜರಗಲಿ. ಎಂದು ಮಕ್ಕಳಿಗೂ ವಿದ್ಯಾಸಂಸ್ಥೆಗೂ ಶುಭ ಹಾರೈಸಿದರು ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ಹಳೆ ವಿದ್ಯಾರ್ಥಿ ಪ್ರಖ್ಯಾತ ವೈದ್ಯರಾದ ಅರುಣ್ ಕುಡ್ವ ಮಾತನಾಡಿ ಶಾಲೆ ಆರಂಭ ವಾದನಿಂದ ದಿವಂಗತ ರುಕ್ಕರಾಮ ಸಾಲಿಯಾನ್ ಲಲಿತಾ ಸಾಲಿಯಾನ್ ಹಾಗೂ ಸೋಮಪ್ಪ ಸುವರ್ಣರ ಶ್ರಮ ತ್ಯಾಗವನ್ನು ಸ್ಮರಿಸಿದರು. ಆ ದಿನಗಳಲ್ಲಿ ಸುರತ್ಕಲ್ಲಿನಿಂದ ಪಡುಬಿದ್ರೆ ವರೆಗೆ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳಿಲ್ಲದೆ ಪ್ರಥಮವಾಗಿ ನಮ್ಮ ಶಾಲೆ ಆರಂಭಗೊಂಡು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು ವೇದಿಕೆಯಲ್ಲಿ ಸಂಚಾಲಕರಾದ ಹರಿಂದ್ರ ಸುವರ್ಣ, ನಿರ್ದೇಶಕರುಗಳಾದಅವಿನಾಶ್, ಯೋಗೀಶ್ ಕೋಟ್ಯಾನ್, ಕೋಶಾಧಿಕಾರಿ ಬಾಲಚಂದ್ರ ಸನಿಲ್, ಸಂಸ್ಥೆಯ ಆಡಳಿತ ಅಧಿಕಾರಿ ಮಂಜುಳಾ ಕೆ ವಿ, ಪ್ರಾಂಶುಪಾಲ ಯತೀಶ ಅಮಿನ್ ಮುಖ್ಯೋಪಾಧ್ಯಾಯಿನಿ ಗೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

