ಸಸಿಹಿತ್ಲು ಬೀಚ್ ನಲ್ಲಿ ತೀವ್ರಗೊಂಡ ಕಡಲ್ಕೊರೆತ

0
31

ಮುಲ್ಕಿ : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿ ಹಿತ್ಲು ಲಚ್ಚಿಲ್ ಶ್ರೀ ರಾಮ ಭಜನಾ ಮಂದಿರದ ಬಳಿ ಕಡಲ್ಕೊರೆತ ತೀವ್ರಗೊಂಡಿದ್ದು ತೀರವಾಸಿಗಳು ಆತಂಕದಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಸಸಿಹಿತ್ಲು ಮುಂಡಾ ಬೀಚ್ ಬಳಿಯ ಉಡುಪಿ ಜಿಲ್ಲೆಯ ಹೆಜಮಾಡಿ ಸಮುದ್ರ ತೀರದಲ್ಲಿ ಜೆಟ್ಟಿ ಕಾಮಗಾರಿ ನಡೆಯುತ್ತಿರುವುದರಿಂದ ಸಸಿಹಿತ್ಲು ಸಮುದ್ರ ತೀರವಾಸಿಗಳು ಆತಂಕದಲ್ಲಿದ್ದಾರೆ.

ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜೀ ಸದಸ್ಯ ಧನರಾಜ್ ಕೋಟ್ಯಾನ್ ಮಾತನಾಡಿ ಹೆಜಮಾಡಿ ಜೆಟ್ಟಿ ಕಾಮಗಾರಿಯಿಂದ ಸಸಿಹಿತ್ಲು ಸಮುದ್ರ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಜೆಟ್ಟಿ ನಿರ್ಮಾಣ ಕಾಮಗಾರಿ ಕಾರಣವಾಗಿದೆ ಅಧಿಕಾರಿಗಳು ಸಸಿಹಿತ್ಲು ಸಮುದ್ರ ತೀರದ ಸುಮಾರು 19 ಕಡೆ ಬ್ರೇಕ್ ವಾಟರ್ ನಿರ್ಮಾಣ ಮಾಡುವ ಭರವಸೆ ನೀಡಿದ್ದರೂ ಇದುವರೆಗೂ ಕಾಮಗಾರಿ ನಡೆದಿಲ್ಲ.

ಬ್ರೇಕ್ ವಾಟರ್ ನಿರ್ಮಾಣ ಕಾಮಗಾರಿಗೆ ಸರ್ಫಿಂಗ್ ಇಲಾಖೆಯ ಅಧಿಕಾರಿಗಳು ಅಡ್ಡಗಾಲು ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಕಡಲ್ಕೊರೆತ ಮುಂದುವರಿದರೆ ಮುಂದೊಂದು ದಿನ ಸಸಿಹಿತ್ಲು ಜನತೆಗೆ ಅಪಾಯಕಾದಿದ್ದು ಕೂಡಲೇ ನಾಗರಿಕರು ಎಚ್ಚೆತ್ತು ಬ್ರೇಕ್ ವಾಟರ್ ನಿರ್ಮಾಣ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಬೇಕು ಎಂದು ಹೇಳಿದ್ದಾರೆ.