ಎರಡನೇ ಬ್ಲಾಕ್ ಸ್ಪಾಟ್ ಫಿಕ್ಸಿಂಗ್ ಮತ್ತು ಜಾಗೃತಿ ಕಾರ್ಯಕ್ರಮ

0
47

ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ನ “ಅವೇಕ್ ಕುಡ್ಲ” ಪರಿಕಲ್ಪನೆಯಡಿಯಲ್ಲಿ 07-12-2025 ರಂದು ಬೆಳಿಗ್ಗೆ 8:00 ಗಂಟೆಗೆ ಜೆಪ್ಪು ಮಾರ್ಕೆಟ್ ರಸ್ತೆ – ಮಂಗಳಾದೇವಿ ಕ್ರಾಸ್ ಪ್ರದೇಶದಲ್ಲಿ “ಎರಡನೇ ಬ್ಲಾಕ್ ಸ್ಪಾಟ್ ಫಿಕ್ಸಿಂಗ್” (ಕಸದ ರಾಶಿ ತೆರವು) ಮತ್ತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯದಲ್ಲಿ ನಮ್ಮ ತಂಡದೊಂದಿಗೆ ಶ್ರೀ ದೇವಿ ಕ್ರಿಕೆಟರ್ಸ್ (ರಿ.) ಸದಸ್ಯರು, ಸ್ಥಳೀಯ ನಿವಾಸಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಹಭಾಗಿಯಾದರು.

ಶ್ರಮದಾನದ  ಒಂದು ವಾರ ಮೊದಲು ಟ್ರಸ್ಟ್ ಸಂಯೋಜಕರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು, ನಂತರ ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶ್ರಮದಾನ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಕಂಡುಬಂದಿದ್ದ ಕಸದ ರಾಶಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಸಮರ್ಪಕವಾಗಿ ಗುಡಿಸಲಾಯಿತು. ಅದೇ ಸಂದರ್ಭದಲ್ಲಿ, ಪರಿಸರದಲ್ಲಿರುವ ಅಂಗಡಿಗಳು ಮತ್ತು ಮನೆಗಳಿಗೆ ಭೇಟಿ ನೀಡಿ ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮರುಕಸದ ಸಮಸ್ಯೆ ಉಂಟಾಗದಂತೆ ನಮ್ಮ ತಂಡ ನಿಯಮಿತ ಫಾಲೋ-ಅಪ್ ನಡೆಸಲು ಯೋಜಿಸಿದೆ. ಸ್ವಚ್ಛ ಪರಿಸರ ಕಾಯ್ದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮನೆಯ ಸುತ್ತಮುತ್ತ ಮತ್ತು ಬೀದಿಗಳನ್ನು ಸ್ವಚ್ಛವಾಗಿ ಕಾಪಾಡುವ ಮೂಲಕ ಮಂಗಳೂರನ್ನು ನಿಜವಾದ ಅರ್ಥದಲ್ಲಿ ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ರೂಪಿಸಬಹುದು.

LEAVE A REPLY

Please enter your comment!
Please enter your name here