ಕವಿತ್ತ ಕರ್ಮಮಣಿ ಪೌಂಡೇಶನ್(ರಿ)ನಾಗರಮುನ್ನೋಳಿ ಇವರು ಕೊಡಮಾಡುವ 2026 ನೇ ಸಾಲಿನ ಪ್ರತಿಷ್ಠಿತ “ಸಾಹಿತ್ಯ ವಿಭೂಷಣ” ಪ್ರಶಸ್ತಿಗೆ ಯುವ ಸಾಹಿತಿ ದೀಪಕ್ ಎಸ್.ಕೋಟ್ಯಾನ್ ಚೇಳ್ಯಾರು, ಸುರತ್ಕಲ್ ಹಾಗೂ ಸಾಹಿತಿ ನವೀನ್ ಸುವರ್ಣ ಪಡ್ರೆ.ಇವರು ಆಯ್ಕೆಯಾಗಿದ್ದಾರೆ.
ಪ್ರಸ್ತುತ ಸಾಲಿನ “ಕಲಾ ವಿಭೂಷಣ” ಪ್ರಶಸ್ತಿಗೆ ಖ್ಯಾತ ರಂಗಕರ್ಮಿ ಭರತ್ ಎಸ್.ಕರ್ಕೇರ ಗುರುಪುರ ಕೈಕಂಬ ಇವರು ಆಯ್ಕೆಯಾಗಿದ್ದಾರೆ.ಇವರು ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ , ಈ ಗೌರವ ಪ್ರಶಸ್ತಿಯನ್ನು ನೀಡುತ್ತಿದ್ದು ಜನವರಿ 25 ರಂದು ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಪೂರ್ವಕವಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

