ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಳ್ಳಾಲ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0
48

ವರದಿ : ಮಂದಾರ ರಾಜೇಶ್ ಭಟ್

ಉಳ್ಳಾಲ : ಈ ಭಾಗದ ಸಮೃದ್ಧ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಳ್ಳಾಲ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

​ತಾಲೂಕು ಘಟಕದ ಅಧ್ಯಕ್ಷರಾದ ಪ್ರವೀಣ್ ಎಸ್. ಕುಂಪಲ ರವರ ಮುತುವರ್ಜಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರ ಅಧಿಕೃತ ಅನುಮೋದನೆಯೊಂದಿಗೆ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.

​ನೇಮಕಗೊಂಡ ಪದಾಧಿಕಾರಿಗಳ ವಿವರ :

​ಗೌರವ ಸಲಹೆಗಾರರು : ಚಂದ್ರಹಾಸ್ ಪಂಡಿತ್ ಹೌಸ್, ಪ್ರವೀಣ್ ಶೆಟ್ಟಿ ಪಿಲಾರು ಮೇಗಿನ ಮನೆ.
​ಪ್ರಧಾನ ಕಾರ್ಯದರ್ಶಿ: ವಿಜೇತ್ ಶೆಟ್ಟಿ ಮಂಜನಾಡಿ.
​ಕೋಶಾಧಿಕಾರಿ : ಶ್ರೀಕಾಂತ್ ಗಾಣಿಗ ಉಳ್ಳಾಲ.
​ಸಾಂಸ್ಕೃತಿಕ ಕಾರ್ಯದರ್ಶಿ : ವಿಜಯಲಕ್ಷ್ಮಿ ಕಟೀಲು.
​ಪ್ರಧಾನ ಸಂಘಟನಾ ಕಾರ್ಯದರ್ಶಿ: ಕಿರಣ್ ಕೊಲ್ಯ.
​ಕಾರ್ಯದರ್ಶಿ : ಮೋಹನ್ ಶಿರ್ಲಾಲು.
​ಪತ್ರಿಕಾ ಪ್ರತಿನಿಧಿ : ಮೋಹನ್ ಕುತ್ತಾರ್.
​ಗೌರವ ಸದಸ್ಯರುಗಳಾಗಿ : ಪ್ರಶಾಂತ್ ಗುರೂಜಿ ಕಾಪಿಕಾಡ್, ಭವಾನಿ ಶಂಕರ ಶಾಂತಿ ಕುಂಪಲ, ನಮಿತ್ ಕುತ್ತಾರ್, ಜಯಪ್ರಕಾಶ್ ಜೋಗಿ ಹಾಗೂ ನಿಖಿಲ್ ಗುರಿಕಾರ ಕಲ್ಲಾಪು ಅವರು ಆಯ್ಕೆಯಾಗಿದ್ದಾರೆ.

​”ಉಳ್ಳಾಲ ತಾಲೂಕಿನಾದ್ಯಂತ ಜಾನಪದ ಚಟುವಟಿಕೆಗಳನ್ನು ತಳಮಟ್ಟದಿಂದ ಸಂಘಟಿಸುವ ಮತ್ತು ಯುವ ಪೀಳಿಗೆಗೆ ನಮ್ಮ ಮೂಲ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಈ ಸಮಿತಿಯನ್ನು ರಚಿಸಲಾಗಿದೆ” ಎಂದು ಘಟಕದ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here