ಸ್ವ ಉದ್ಯೋಗ ದಲ್ಲಿ ಸ್ವವಲಂಬಣೆ ಬದುಕು ಸಾಧ್ಯ

0
61

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಗುರುವಾಯನಕೆರೆ/ ಬೆಳ್ತಂಗಡಿ ಸಿಡ್ಬಿ ಪ್ರಯಾಸ ಸ್ವ ಉದ್ಯೋಗ ಕ್ಕೆ 1ಕೋಟಿ ಪ್ರಗತಿ ನಿಧಿ ಮಜೂರಾತಿ ವಿತರಣೆ .

ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರು ದಿನೇಶ D ಪ್ರಸ್ತಾವಿಕ ಮಾತನಾಡಿ ಪೂಜ್ಯರ ಮಾರ್ಗದರ್ಶನದಂತೆ ಸಿಡ್ಬಿ ಪ್ರಯಾಸ ಯೋಜನೆಯು ನಮ್ಮ ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವ ಉದ್ಯೋಗ ಕಲ್ಪಿಸಲು ಬೇಕಾದ ಅಗತ್ಯ ಸಹಕಾರವನ್ನು ನೀಡುವ ಯೋಜನೆಯಾಗಿದೆ ಯೋಜನೆಯ ಮೂಲ ಸ್ವಾವಲಂಬಿ ಬದುಕನ್ನು ಯುವ ಜನತೆ ಕಟ್ಟಿಕೊಳ್ಳಬೇಕು ಎಂಬ ಉನ್ನತ ಚಿಂತನೆಯಾಗಿದೆ ದಿನನಿತ್ಯ ಆದಾಯ ಬರುವ ವ್ಯವಹಾರಕ್ಕೆ ಪೂರಕವಾಗಿ ಕಿರಾಣಿ ಅಂಗಡಿ , ಹೋಟೆಲ್, ಹೂವಿನ ಅಂಗಡಿ , ಬೇಕರಿ ಮತ್ತು ಚಾಟ್ಸ್ ಅಂಗಡಿ , ಕೃಷಿ ಉತ್ಪನ್ನಗಳಿಗೆ ಇತರೆ ಉದ್ದೇಶ ಗಳಿಗೆ 50,000 ರಿಂದ 5 ಲಕ್ಷದವರೆಗೆ ಸಿಡ್ಬಿ ಪ್ರಗತಿ ನಿಧಿಯನ್ನು ದಾಖಲೆ ಅನುಗುಣವಾಗಿ ವಿತರಿಸಲಾಗುವುದು,ನಮ್ಮ ತಾಲೂಕಿನ ಪ್ರಗತಿ ಬಂದು ಸ್ವ ಸಹಾಯ ತಂಡದ ಸ್ವ ಉದ್ಯೋಗ ಮಾಡುವ ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಾಸವಿಕ ವಾಗಿ ಮಾತನಾಡಿದರು .

ರೂಟ್ ಸೆಟ್ ಸಂಸ್ಥೆಯ ಕರುಣಾಕರವರು ಮಾತನಾಡಿ ಸ್ವ ಉದ್ಯೋಗ ಆಯ್ಕೆ ಮಾಡುವಾಗ ಗಮನಿಸಬೇಕಾದ ಅವಶ್ಯಕತೆ ಬಗ್ಗೆ ಲಾಭ ನಷ್ಟದ ಬಗ್ಗೆ ಗ್ರಾಹಕರಲ್ಲಿ ವ್ಯವಹಾರದ ರೀತಿ ಬಗ್ಗೆ ತರಬೇತಿಯನ್ನು ಪಡೆದು ಸ್ವ ಉದ್ಯೋಗ ಮಾಡುವುದು ಸೂಕ್ತ ನಮ್ಮ ಸಂಸ್ಥೆಯಲ್ಲಿ ಎಲ್ಲಾ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು . ಸಿಡ್ಬಿ ಯೋಜನಾಧಿಕಾರಿಗಳು ಶ್ರೀ ಮತಿ ಅನುಷಾ ರವರು ಸಿಡ್ಬಿ ಯೋಜನೆಗೆ ನೀಡಬೇಕಾದ ದಾಖಲಾತಿ ಯ ಬಗ್ಗೆ ತಿಳಿಸಿದರು .
ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಯೋಜನಾಧಿಕಾರಿಗಳು ಅಶೋಕ B, ಕೃಷಿ ಮೇಲ್ವಿಚಾರಕರು ಕೃಷ್ಣ ಮೇಲ್ವಿಚಾರಕರು ಶ್ರೀ ಮತಿ ಯಶೋದ, ಕಛೇರಿ ಪ್ರಬಂಧಕರು ಆಕಾಶ್, ಹಾಗೂ ಸ್ವ ಉದ್ಯೋಗ ಮಾಡುವ ಸದಸ್ಯರು ಉಪಸಿತರಿದ್ದರು .

LEAVE A REPLY

Please enter your comment!
Please enter your name here