ಉಡುಪಿ : ಉಡುಪಿ ಕಾಡುಬಿಟ್ಟಿನ ಪ್ರಗತಿನಗರ ನಿವಾಸಿ, ಸುಬ್ಬಣ್ಣ ರೈ ಅವರ ಧರ್ಮಪತ್ನಿ ಹಾಗೂ ಉಡುಪಿ ESI ಆಸ್ಪತ್ರೆಯಲ್ಲಿ ಹಿರಿಯ ಮೆಡಿಸಿನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೇಮಾ ಶೆಟ್ಟಿ (56) ಅವರು (ಜ.23) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಕಳೆದ ಹಲವು ವರ್ಷಗಳಿಂದ ಉಡುಪಿ ESI ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ರೋಗಿಗಳ ಆರೈಕೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯತೆ ಹಾಗೂ ವೃತ್ತಿಪರತೆಯ ಮೂಲಕ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದಿಂದ ವೈದ್ಯಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಶೋಕದ ಛಾಯೆ ಆವರಿಸಿದೆ. ಮೃತರು ಪತಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

