ಮಹಿಳೆಯೊಬ್ಬರ ಕ್ರೆಡಿಟ್​ ಕಾರ್ಡ್​ನಿಂದ 4 ಲಕ್ಷ ರೂ. ಎಗರಿಸಿದ ಖದೀಮರು

0
140


ಉಡುಪಿ: ಮಹಿಳೆಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು ಐಮೊಬೈಲ್​ ಆ್ಯಪ್​ ಮೂಲಕ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​ ಹಾಗೂ ಡೆಬಿಟ್​ ಕಾರ್ಡನಿಂದ ಒಟ್ಟು 4,31,697 – ರೂ. ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಮಣಿಪಾಲದ ಬೇಬಿ ಎಸ್​. (55) ಇವರಿಗೆ ಗುರುವಾರ ಸಾಯಂಕಾಲ ಐಸಿಐಸಿಐ ಕ್ರೆಡಿಟ್​ ಕಾರ್ಡ್​ ಎಂಬ ಹೆಸರಿನಿಂದ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದ ಸ್ವಲ್ಪ ಹೊತ್ತಿನ ಬಳಿಕ ಸ್ವಯಂಚಾಲಿತವಾಗಿ ಮೊಬೈಲ್​ನಲ್ಲಿ ಅಪರಿಚಿತ ಆ್ಯಪ್​ ಇನ್​ಸ್ಟಾಲ್​ ಆಗಿದೆ. ನಂತರ ಮೊಬೈಲ್​ ಸ್ವಿಚ್​ ಆಫ್​ ಆಗಿತ್ತು. ಸ್ವಲ್ಪ ಸಮಯದ ಬಳಿಕ ಮಹಿಳೆಯ ಬ್ಯಾಂಕ್​ ಖಾತೆ ಕ್ರೆಡಿಟ್​ ಕಾರ್ಡನಿಂದ 294800 ಮತ್ತು 129900 ರೂ. ಹಾಗೂ ಡೆಬಿಟ್​ ಕಾರ್ಡನಿಂದ 2000 -ರೂ,, 999 ರೂ, 1999 ರೂ., 1999 -ರೂ ಹಣ ಕಡಿತಗೊಂಡಿದೆ. ತಕ್ಷಣ ಬ್ಯಾಂಕ್​ಗೆ ಕರೆ ಮಾಡಿ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here