ಶಾರದಾ ಎ. ಅಂಚನ್ ಇವರ “ಅಕೇರಿದ ಎಕ್ಕ್! “ತುಳು ಕಾದಂಬರಿಗೆ ಪ್ರತಿಷ್ಠಿತ ಪಣಿಯಾಡಿ ಪ್ರಶಸ್ತಿ

0
126

 ತುಳು ಕೂಟ ಉಡುಪಿ ಪ್ರತೀ ವರ್ಷ ಕೊಡಮಾಡುವ ಯಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ

 ಮುಂಬೈ ನಿವಾಸಿ ಶಾರದಾ ಎ.ಅಂಚನ್ ಕೊಡವೂರು ಇವರ ” ಅಕೇರಿದ ಎಕ್ಕ್! ” ಕಾದಂಬರಿ ಆಯ್ಕೆಯಾಗಿದೆ.

ತುಳುವಿನ ಮೊದಲ ಕಾದಂಬರಿಕಾರ ಯಸ್.ಯು.ಪಣಿಯಾಡಿ  ನೆನಪಿನಲ್ಲಿ ತುಳು ಕೂಟ ಉಡುಪಿ  ಕಳೆದ ೩೦ ವರುಷಗಳಿಂದ ಪಣಿಯಾಡಿ ಪ್ರಶಸ್ತಿ ನೀಡುತ್ತಿದೆ.  

ಹಿರಿಯ ಪತ್ರಕರ್ತ  ನಿತ್ಯಾನಂದ ಪಡ್ರೆ,ಸುಲೋಚನಾ ಪಚ್ಚಿನಡ್ಕ, ಪುತ್ತಿಗೆ ಪದ್ಮನಾಭ ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ಶಾರದಾ ರ  ತುಳು ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

 ಶಾರದಾ ಅಂಚನ್  ಮೂಲತ ಉಡುಪಿಯ ಕೊಡವೂರಿನವರು.ಇವರು ನವಿ ಮುಂಬೈಯ ಎಂ.ಜಿ.ಎಂ ಮೆಡಿಕಲ್ ಕಾಲೇಜು ವಿಶ್ವ ವಿದ್ಯಾಲಯದಲ್ಲಿ ರಕ್ತನಿಧಿಯಲ್ಲಿ ತಂತ್ರಜ್ಞೆ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೆಯೇ ಔದ್ಯೋಗಿಕವಾಗಿ ಇದುವರೆಗೆ ಸುಮಾರು1000ಕ್ಕೂ ಹೆಚ್ಚು ರಕ್ತದಾನ ಶಿಭಿರಗಲ್ಲಿ ಭಾಗವಹಿಸಿರುತ್ತಾರೆ.

        ಪತಿ ಆನಂದ್ ಅಂಚನ್ ಹಾಗು ಪುತ್ರ ಅನುರಾಗ್ ಅಂಚನ್ ನೊಂದಿಗೆ ಸಂಸಾರ ಮಾಡುತ್ತಾ ,ಸಾಹಿತ್ಯದಲ್ಲಿ ಬಹಳಷ್ಟು ಸೇವೆಯನ್ನು ಮಾಡುತ್ತಿದ್ದು ಒಳನಾಡು ಹಾಗು ಹೊರನಾಡಿನಲ್ಲೂ ಅಗ್ರಗಣ್ಯ ಬರಹಗಾರರಾಗಿ ಪರಿಚಯಿಸಿಕೊಂಡಿದ್ದಾರೆ. ತುಳು ಮತ್ತು  ಕನ್ನಡದಲ್ಲಿ ಇದುವರೆಗೆ ಸುಮಾರು  ಹದಿನೆಂಟು ಕೃತಿಗಳನ್ನು ಬರೆದಿರುವ ಇವರು ತನ್ನ ಕೃತಿಗಳಿಗೆ ಹಾಗೂ ಸಾಹಿತ್ಯ  ಸೇವೆಗೆ ಬಹಳಷ್ಟು  ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಅವುಗಳಲ್ಲಿ ಕೆಲವನ್ನು ಹೆಸರಿಸಬೇಕೆಂದರೆ …

  “ಪಾರ್ದನ’ – ತುಳು ಕವನ ಸಂಕಲನಕ್ಕೆ ಕರ್ನಾಟಕ ತುಳು  ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕರ್ಲ ಕುರ್ಲೆ- ಕಥೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮದಿಪು ಸಾಹಿತ್ಯ ಪುರಸ್ಕಾರ, “ನಂಬಿ ಸತ್ಯೋಲು” -ತುಳು ಕೃತಿಗೆ ದಿ//ಶಿವಾನಂದ ಕರ್ಕೇರ ದತ್ತಿ ನಿಧಿ ಪುಸ್ತಕ ಪ್ರಶಸ್ತಿ , “ನಡೆ ನೀ ಮುಂದೆ’- ಕವನ ಸಂಕಲನಕ್ಕೆ “ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ” , ರಕ್ತವೇ ಜೀವನದಿ -ವೈದ್ಯಕೀಯ  ಕೃತಿಗೆ  ಭಾರತ ರತ್ನ ಸರ್ ಎಂ.  ವಿಶ್ವೇಶ್ವರಯ್ಯ ಇಂಜಿನಿಯರಿಂಗ್   ಪ್ರತಿಷ್ಠಾನದ “ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ”,ಮತ್ತು ಇದೇ ಕೃತಿಗೆ  ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಂದ – ಡಾ .ಎಚ್. ನರಸಿಂಹಯ್ಯ ದತ್ತಿ ಪ್ರಶಸ್ತಿ ,ಇವರ ಮತ್ತೊಂದು ವೈದ್ಯಕೀಯ ಕೃತಿ  ” ರಕ್ತಶುದ್ಧಿ-ಆರೋಗ್ಯವೃದ್ಧಿ’  ಗೆ  – ಕನ್ನಡ ಸಾಹಿತ್ಯಪರಿಷತ್ತಿನ ” ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ, 9ನೆ  ಅಖಿಲ ಕರ್ನಾಟಕ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದಲ್ಲಿ  “ಕರ್ನಾಟಕ ಯುವ ರತ್ನ ಪ್ರಶಸ್ತಿ,ಕಲಾಜಗತ್ತು ಮುಂಬೈ ಇವರಿಂದ “ತ್ಹೌಳವ  ಸಿರಿ ಪ್ರಶಸ್ತಿ”,ತುಳುಕೂಟ ಬೆಂಗಳೂರು ಇವರಿಂದ “ಜೀಟಿಗೆ” ಕವಿತೆಗೆ ಪ್ರಥಮ ಬಹುಮಾನ.ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಮೈಸೂರು ಇವರಿಂದ ಸಾಹಿತ್ಯ ಮತ್ತು ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ –  ಸವಿಗನ್ನಡ ಸಾಹಿತ್ಯ ಪ್ರಶಸ್ತಿ ಮತ್ತು ದಸರಾ  ಕಾವ್ಯ ಪುರಸ್ಕಾರ,   ಶ್ರೀ ಎಂ.ಬಿ. ಕುಕ್ಯಾನ್ -ದ  ರೈಟರ್ ಆಫ್ ದ  ಇಯರ್ ಪ್ರಶಸ್ತಿ,  ಆರದಿರಲಿ ಬೆಳಕು ಆರಾಧನಾ ತಂಡ ಆಯೋಜಿಸಿದ ಕಥಾಸ್ಪರ್ಧೆಯಲ್ಲಿ -ಪಂಚಕಥಾ ಪ್ರಶಸ್ತಿ,ವಿಶ್ವ ಕನ್ನಡ ಬಳಗ (ರಿ)ಹುಬ್ಬಳ್ಳಿ ಇವರಿಂದ- ವೀರರಾಣಿ  ಕಿತ್ತೂರು  ಚೆನ್ನಮ್ಮ  ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಪುತ್ತೂರು ದಕ್ಷಿಣ ಕನ್ನಡ ಇವರಿಂದ -ಗಡಿನಾಡ ಧ್ವನಿ ಕಾವ್ಯಭೂಷಣ ಪ್ರಶಸ್ತಿ,ಅಲ್ಲದೆ ಹತ್ತು ಹಲವು ಸಂಘ ಸಂಸ್ಥೆಗಳು ಇವರಿಗೆ ಬಿರುದುಗಳನ್ನು ನೀಡಿ ಗೌರವಿಸಿವೆ.

ಸಾಹಿತ್ಯ ಮಾತ್ರವಲ್ಲದೆ ಸಂಗೀತದಲ್ಲೂ ಆಸಕ್ತಿ ಇರುವ ಇವರು ಶಾಸ್ತ್ರೀಯ ಸಂಗೀತಾಭ್ಯಾಸ ಕೂಡ  ಮಾಡಿರುತ್ತಾರೆ   

LEAVE A REPLY

Please enter your comment!
Please enter your name here