ನಾನಿಲ್ತಾರ್ : ಶಿವ ಮೂಲ್ಯ ನಿಧನ

0
24

ಮುಂಡ್ಕೂರು : ನಾನಿಲ್ತಾರ್ ಮುಲ್ಲಡ್ಕ ಮಡಿಕೆ ಮನೆಯ ಶಿವ ಮೂಲ್ಯ (67) ಅವರು ಅ14 ರಂದು ನಿಧನರಾಗಿದ್ದಾರೆ. ಮೃತರು ತಾಯಿ, ಪತ್ನಿ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಹಾಗೂ ನಾನಿಲ್ತಾರ್ ಕುಲಾಲ ಸಂಘದ ಕೋಶಾಧಿಕಾರಿ ಗೋಪಾಲ್ ಮೂಲ್ಯ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈಯ ಸಂಚಾಲಕ ಕೃಷ್ಣ ಮೂಲ್ಯ ನಾಲಾಸೋಪರ್ ಮತ್ತು ಸುಧಾಕರ್ ಮೂಲ್ಯ ನಾಲಾಸೋಪರ್ ಸಹಿತ ಆರು ಮಂದಿ ಸಹೋದರರು ಒಬ್ಬಳು ಸಹೋದರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಅ15 ಮಧ್ಯಾಹ್ನ 3:00ಗೆ ಮುಲ್ಲಡ್ಕದ ಮನೆಯಲ್ಲಿ ನಡೆಯಲಿದೆ.

ಶಿವ ಮೂಲ್ಯ ನಿಧನಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್, ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷ ಜಯರಾಮ್ ಮೂಲ್ಯ ಮತ್ತು ಪದಾಧಿಕಾರಿಗಳು, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಮತ್ತು ಪದಾಧಿಕಾರಿಗಳು,ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈಯ ಅಧ್ಯಕ್ಷ ಹರೀಶ್ ಮೂಲ್ಯ ಮತ್ತು ಪದಾಧಿಕಾರಿಗಳು ಸದಸ್ಯರು ದುಃಖ ಸಂತಾಪ ಸೂಚಿಸಿರುವರು.