ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಕಾರ್ತಿಕ ಅಮಾವಾಸ್ಯೆಯ ಪರ್ವಕಾಲದಲ್ಲಿ ದೀಪೋತ್ಸವ ಮಹೋತ್ಸವವು ಕ್ಷೇತ್ರದ ಧರ್ಮದರ್ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಸರ್ವೇಶ ತಂತ್ರಿಗಳ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡತು.
ಕ್ಷೇತ್ರದಲ್ಲಿ ವಿಶೇಷವಾಗಿ ಅಲಂಕೃತಗೊಂಡ ದೀಪಸ್ತಂಭದಲ್ಲಿ ಶ್ರೀ ಗುರೂಜಿಯವರು ದೀಪವನ್ನು ಬೆಳಗಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ದೀಪೋತ್ಸವ ಮಹೋತ್ಸವದಲ್ಲಿ ಕ್ಷೇತ್ರದ ಒಳ ಆವರಣ ಹಾಗೂ ಹೊರ ಆವರಣಗಳಲ್ಲಿ ಹಣತೆಯಲ್ಲಿ ದೀಪವನ್ನು ಬೆಳಗಿ ಪರಿಸರವೆಲ್ಲವೂ ದೀಪ ಮಯವಾಯಿತು.
ಹಣತೆಯಲ್ಲಿ ವಿವಿಧ ಚಿತ್ತಾರಗಳು, ಬಣ್ಣ ಬಣ್ಣದ ರಂಗೋಲಿಗಳು, ದೀಪ ದಿಂದಲೇ ನಿರ್ಮಿಸಲಾದ ದೀಪ ಗುಡಿಯು ವಿಶೇಷ ಆಕರ್ಷಣೆಯಾಗಿತ್ತು.. ಕ್ಷೇತ್ರದ ಗಾಯತ್ರಿ ಧ್ಯಾನ ಪೀಠ ನಾಗಾಲಯ
ದುರ್ಗಾ ಆದಿಶಕ್ತಿಯ ಆವರಣ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನ ದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಕ್ಷೇತ್ರದಲ್ಲಿ ತಂತ್ರವರಿಯರಿಂದ ರಂಗಪೂಜೆ ನೆರವೇರಿತು..
ಕ್ಷೇತ್ರದ ಪ್ರಧಾನ ಶಕ್ತಿಯಾದ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಕ್ಷೇತ್ರದ ಅಲಂಕಾರ ತಜ್ಞ ಶ್ರೀ ಆನಂದ್ ಬಾಯರಿ ಅವರು ಪಂಚ ವಸ್ತ್ರದಿಂದ ಪಂಚ ದುರ್ಗೆಯಾಗಿ ಅಲಂಕರಿಸಿದ್ದರು.. ಅರ್ಚಕ ಅನಿಷಾ
ಆಚಾರ್ಯ ಸ್ವಸ್ತಿಕ್ ಆಚಾರ್ಯ ಶ್ರೀವತ್ಸ ಅಡಿಗ ಶ್ರೀವಿಜಯ ಭಟ್ ಸಹಕರಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲೆವೂರು ರಂಜಿತ್ ದೇವಾಡಿಗ ಅವರಿಂದ ಮಂಗಳವಾದ್ಯ ಸೇವೆ ನೆರವೇರಿತು
ಅಸಂಖ್ಯಾತ ಭಕ್ತರುಗಳ ಸಾಕಾರದೊಂದಿಗೆ ದೀಪೋತ್ಸವ ಮಹೋತ್ಸವವಾಗಿ ಅತಿ ವೈಭವೋಪೇತವಾಗಿ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.

