ಬೈಂದೂರು: ಬೈಂದೂರು ತಾಲೂಕು ಬಿಜೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ಸನ್ನಿಧಿ, ಮಕ್ಕಿ ದೇವಸ್ಥಾನದ ಶಿಲಾ ದೇಗುಲದ ಲೋಕಾರ್ಪಣೆ, ಶಿಖರ ಕಲಶ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಕೋಟಿ ಶಿವ ಪಂಚಾಕ್ಷರಿ ಜಪ-ಯಜ್ಞ, ಮಹಾ ಅನ್ನಸಂತರ್ಪಣೆ, ಧಾರ್ಮಿಕ- ಸಾಂಸ್ಕೃತಿಕ ದಿನಾಂಕ 22-04-202580 25-04-2025ರ ವರೆಗೆ ನಡೆಯಲಿದೆ.
ಬೆಳಿಗ್ಗೆ 8ಗಂಟೆಯಿಂದ ಚೆಂಡೆವಾದನ ವಿವಿಧ ವೇಷ ಭೂಷಣಗಳೊಂದಿಗೆ ಸ್ವಾಮೀಜಿ ಅವರನ್ನು ಮತ್ತು ಗಣ್ಯರನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು.
ಇಂದು ಬೆಳಿಗ್ಗೆ 8-00ಕ್ಕೆ ಧಾರ್ಮಿಕ ಕಾರ್ಯಕ್ರಮಗಳ ಪ್ರಾರಂಭ,ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ ಇವರ ದಿವ್ಯ ಉಪಸ್ಥಿತಿಯಲ್ಲಿ ಅಷ್ಟೋತ್ತರ ಶತ ನಾಳಿಕೇರ ಖ೦ಡ ಮಹಾ ಗಣಪತಿ ಯಾಗದ ಪೂರ್ಣಾಹುತಿ, ಮಹಾಪೂಜಾ, ಮಹಾಮಂಗಳಾರತಿ, ಮಧ್ಯಾಹ್ನ ಗಂಟೆ 12:30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6:00 ರಿಂದ ವಿವಿಧ ಹೋಮಹವನಾದಿಗಳು, ಬ್ರಹ್ಮಮಂಡಲ ದರ್ಶನ, ಬ್ರಹ್ಮಕಲಶ ಸ್ಥಾಪನೆ, ಬ್ರಹ್ಮಕಲಶ ಅಧಿವಾಸ ಹೋಮ, ನವಕುಂಡಗಳಲ್ಲಿ ಅಧಿವಾಸ ಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ. ರಾತ್ರಿ ಗಂಟೆ 8:00ಕ್ಕೆ ಅನ್ನಸಂತರ್ಪಣೆ ನಡೆಯಿತು.
2:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಡಾ.ಭೀಮೇಶ್ವರ ಜೋಶಿ ಧರ್ಮಕರ್ತರು ಶ್ರೀ ಕ್ಷೇತ್ರ ಹೊರನಾಡು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಗಣ್ಯರ ಸಮ್ಮುಖದಲ್ಲಿ ವಿದ್ವಾನ್ ಗೋಪಾಲಕೃಷ್ಣ ಜೋಶಿ ದೈವಜ್ಞರು ಉಡುಪಿ ವೆ| ಮೂ| ಆಗಮ ಶಾಸ್ತ್ರಜ್ಞ ಕಟ್ಟೆಶಂಕರ ಪರಮೇಶ್ವರ ಭಟ್ಟ – ದೇವಸ್ಥಾನದ ತಾಂತ್ರಿಕರು,ವೇ|ಮೂ| ವಿಶ್ವನಾಥ ಭಟ್ಟ – ಪುರೋಹಿತರು, ತಲ್ಲೂರು ವೇದ ಮೂರ್ತಿ ದಿಲೀಪ ಶ್ರೀಧರ ಭಟ್ಟ – ಷಡಕ್ಷರಿ ಗೋಕರ್ಣ, ವೇದ ಮೂರ್ತಿ ಚಂದ್ರಶೇಖರ ಅಡಿಗ- ಪ್ರಧಾನ ಅರ್ಚಕರು, ಶಂಕರನಾರಾಯಣ ದೇವಸ್ಥಾನ ಮೊಗೇರಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಗುರುರಾಜ ಶೆಟ್ಟಿ ಗಂಟಿಹೊಳೆ – ಮಾನ್ಯ ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ, ಪ್ರಭಾಕರ್ ಮಹಾಬಲೇಶ್ವರ್ ರಾವ್ ಬಂಟ್ವಾಳ್, ಖ್ಯಾತ ಉದ್ಯಮಿಗಳು, ಪುಣೆ ಶ್ರೀಮತಿ ಸುಮಲತ ಪ್ರಭಾಕರ್ ರಾವ್ ಬಂಟ್ವಾಳ್, ಪುಣೆ ಕೆ.ಕಿಶೋರ್ ಕುಮಾರ್ ಹೆಗ್ಡೆ, ಖ್ಯಾತ ಉದ್ಯಮಿಗಳು ಚಿಕ್ಕಮಗಳೂರು, ಗುರುರಾಜ್ ಭಟ್ ದೇವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರು ಬಾಲಚಂದ್ರ ಭಟ್, ಶರತ್ ಮಡಿಮಣ್, ಸತೀಶ್ ಶೆಟ್ಟಿ, ಶ್ರೀ ರವೀಂದ್ರ ವೆಂಕಟೇಶ್ ಕಿಣಿ,ಪದ್ಮನಾಭ ಮೇರ್ಟ,ಕಳಿ ಚಂದ್ರಯ್ಯ ಆಚಾರ್ಯ ,ನಂಬಿದ ಕುಟುಂಬಸ್ಥರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ನಾಗರಾಜ್ ಭಟ್ ಸ್ವಾಗತಿಸಿದರು. ಜಾಹ್ನವಿ ಭಟ್ ,ಕುಮಾರಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.