ಶ್ರೀ ಕ್ಷೇತ್ರ ಶಂಕರಪುರ: ಕಾಲ್ನಡಿಗೆಯಲ್ಲಿ ಭೈರವ ಶ್ವಾನದ ಜೊತೆ ದೇಶ ಸಂಚಾರ ಹೊರಟ ಸುಮಂತ್ ಅಶ್ವಿನ್ ಬೀಳ್ಕೊಡುವ ಸಮಾರಂಭ

0
122

ಕಟಪಾಡಿ,:ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಶಂಕರಪುರದಲ್ಲಿ ರಾಷ್ಟ್ರಧ್ವಜಕ್ಕೆ ಸಿಂಧೂರ ಅರ್ಚನೆ ಮಾಡಲಾಗಿದ್ದು, ಈಗಾಗಲೇ ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಅಭಿಯಾನದಲ್ಲಿ ಕಾಲ್ನಡಿಗೆಯಲ್ಲಿ ಭೈರವ ಶ್ವಾನದ ಜೊತೆ ದೇಶ ಸಂಚಾರ ಹೊರಟ ಸುಮಂತ್ ಅಶ್ವಿನ್ ರವರನ್ನು ಬೀಳ್ಕೊಡುವ ಸಮಾರಂಭ ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಡೆಯಿತು.
ಸುಮಂತ ಅಶ್ವಿನ್ ಅವರು ಈಗಾಗಲೇ ಸುಮಾರು ಎರಡು ಸಾವಿರ ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದು ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮುಗಿಸಿದ್ದು,ಮುಂದೆ ಸುಮಾರು 7 ಸಾವಿರ ಕಿಮೀ ದೂರ ಕ್ರಮಿಸಿ ಕೊನೆಯದಾಗಿ ಜಮ್ಮು-ಕಾಶ್ಮೀರ ಬಳಿಯ ಲಡಾಕ್ ನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ ಈ ಸಂದರ್ಭದಲ್ಲಿ ಇಲ್ಲಿ ಪೂಜಿಸಲ್ಪಟ್ಟ ರಾಷ್ಟ್ರಧ್ವಜ ಲಡಾಕ್ ನಲ್ಲಿ ಬಾನೆತ್ತರಕ್ಕೆ ಹಾರಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಯಿಶ್ವರ್ ಗುರೂಜಿ ಸುಮಂತ್ ಅವರು ಅತ್ಯಂತ ಸಣ್ಣ ವಯಸ್ಸಿನಲ್ಲಿ ಈ ಅಪರೂಪದ ಸಾಧನೆ ಮಾಡುತ್ತಿದ್ದು ಅವರ ಉದ್ದೇಶ ಪ್ರಾಣಿ ಪಕ್ಷಿಗಳ ರಕ್ಷಣೆ ಆಗಿದೆ ತಮ್ಮ ಸಮಾಜದಲ್ಲಿ ಪ್ರಾಣಿ ಪಕ್ಷಿಗಳು ಮತ್ತು ಇತರ ಜೀವಜಂತುಗಳು ಸರಿಯಾಗಿದ್ದಲ್ಲಿ ಮಾತ್ರ ಪ್ರಕೃತಿ ಸಮತೋಲನದಲ್ಲಿ ನಡೆಯಲು ಸಾಧ್ಯ ಈ ನಿಟ್ಟಿನಲ್ಲಿ ಈ ಅಪರೂಪದ ಪಾದಯಾತ್ರೆ ಯಶಸ್ವಿಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ಪಾದಯಾತ್ರೆ ಸುಮಂತ್ ನಾನು ಈಗಾಗಲೇ 2000 ಕಿ.ಮೀ ಯಾತ್ರೆ ಪೂರೈಸಿದ್ದು ಮುಂದಿನ ಒಂದು ವರ್ಷದ ಅವಧಿಯಲ್ಲಿ 7,000 ಕಿಲೋಮೀಟರ್ ಯಾತ್ರೆ ಮಾಡಲಿದ್ದು ಈ ಯಾತ್ರೆ ಉದ್ದಕ್ಕೂ ಬಹಳಷ್ಟು ಜನರು ಸಹಕಾರ ಮಾಡಿದ್ದಾರೆ ಸಾಮಾಜಿಕ ಜಾಲತಾಣಗಳ ಮೂಲಕ ಕೂಡ ಅನೇಕ ರೀತಿಯ ಸಂದೇಶಗಳನ್ನು ಹಾಕುದರ ಮೂಲಕ ಪ್ರಾಣಿ ಪಕ್ಷಿಗಳ ರಕ್ಷಣೆ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.
ಈ ಸಂದರ್ಭ ಮಠದ ಪ್ರಮುಖರಾದ ಸತೀಶ್, ನಿಲೇಶ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here