ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ “ಉಡುಪಿ ದಿಂಡಿ” ಮೆರವಣಿಗೆ ಸಂಪನ್ನ

0
164

ಉಡುಪಿ:  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ   ,ಶತಮಾನೋತ್ತರ ರಜತ ಮಹೋತ್ಸವ  125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವದ  ಪರ್ವಕಾಲದಲ್ಲಿ  ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ   ಹೊ  , ಹಣ್ಣುಗಳಿಂದ ವಿಶೇಷ  ಅಲಂಕಾರ  ಹಾಗೂ ಜೂ  01 ಆದಿತ್ಯವಾರ ಸಂಜೆ 5 ಗಂಟೆಗೆ ಪುರಾಣ ಪ್ರಸಿದ್ಧ ಭಜನಾ ದಿಂಡಿ ಮೆರವಣಿಗೆ ನೆಡೆಯಿತು.                                                                                                                         

ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ  ಆಗಮಿಸಿದಾಗ  ದೇವಳದವತಿಯಿಂದ ಭವ್ಯ ಸ್ವಾಗತ ನೀಡಿ ಗೌರವಿಸಲಾಯಿತು  , ಶ್ರೀಪಾದರು   ಭಜನಾ ದಿಂಡಿ ಉತ್ಸವ ಮೆರವಣಿಗೆಗೆ  ದೀಪ ಬೆಳಗಿಸಿ ಚಾಲನೆ ನೀಡಿದರು ,  ಶ್ರೀಪಾದರನ್ನು  ವಿಶೇಷ ಹೂಗಳಿಂದ ಅಲಂಕೃತ ವಾಹನದಲ್ಲಿ ಪೀಠದಲ್ಲಿ ಕುಳಿತು ಭಜನಾ ದಿಂಡಿ ಉತ್ಸವದಲ್ಲಿ   ಪಾಲ್ಗೊಂಡು ಭಕ್ತಾಧಿಗಳನ್ನು ಅನುಗ್ರಹಿಸಿದರು. .

 ಪೂಜ್ಯ ಗುರುಗಳ  ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಈ ಶುಭಸಂದರ್ಭದಲ್ಲಿ   ಶ್ರೀಗುರುಗಳ ಆರಾಧನೆ ಅಂಗವಾಗಿ  ,ದಿವ್ಯ ಸ್ವರ್ಣ ಪಾದುಕೆ ಮೆರವಣಿಗೆಯಲ್ಲಿ ಸಾಗಿಬಂತು  , ಭಕ್ತರೂ  ಅಲ್ಲಲ್ಲಿ ಆರತಿ ನೀಡಿ  ಪೂಜೆ  ಸಲ್ಲಿಸಿದರು.                                                                                                                                                                                                                                                                                                                                        ಶ್ರೀ ವಿಠೋಬಾ ರುಖುಮಾಯಿ  ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ಗೈದು ಉಡುಪಿ ದೇವಳದಿಂದ ಹೊರಟು ಐಡಿಯಲ್ ಸರ್ಕಲ್  , ಹಳೇ ಡಯಾನ ಸರ್ಕಲ್  , ತ್ರಿವೇಣಿ ಸರ್ಕಲ್  , ಚಿತ್ತರಂಜನ್ ವೃತ್ತ ,  ಕೊಳದಪೇಟೆಯಾಗಿ ದೇವಳಕ್ಕೆ ಬಂದು ತಲುಪಿತು   ಸಾವಿರಾರು ಭಕ್ತರೂ ಸಮವಸ್ತ್ರ ಧರಿಸಿ ಪಾಲ್ಗೊಂಡರು  , ಮೆರವಣಿಗೆಯಲ್ಲಿ ವಿಶೇಷ ವಾಗಿ  ಶ್ರೀ ವಿಠೋಬಾ ರುಖುಮಾಯಿ , ಶ್ರೀ ಪುರಂದರದಾಸ , ಶ್ರೀ ಕನಕದಾಸ  ವೇಷ ಧರಿಸಿ  ಮೆರಗಿ ಹೆಚ್ಚಿಸಿದರು , ಸಾವಿರಾರು ಪುರುಷರು  ,  ಮಹಿಳಾಯರು ,  ಯುವಕ  , ಯುವತಿಯರು ಭಜನೆ ಸಂಕೀರ್ತನೆ ಹಾಡಿ ನಲಿದು ಕುಣಿದಾಡಿದರು    , ವಿಶೇಷ ಆಕರ್ಷಣೆಯ ಭವ್ಯ ದಿಂಡಿ ಉತ್ಸವದಲ್ಲಿ     ಊರ  ಪರಊರಿನ  ವಿವಿಧ   ಭಜನಾ ತಂಡಗಳು ಭಾಗವಹಿಸಿ  ಸಹಕರಿಸಿದರು  

 ಸಮಾರಂಭದಲ್ಲಿ ಭಜನಾ ರೂವಾರಿ ಮಟ್ಟಾರ್ ಸತೀಶ್ ಕಿಣಿ , ಆಡಳಿತ ಮೊಕ್ತೇಸರ ಪಿ ವಿ  ಶೆಣೈ  , ನರಹರಿ ಪೈ  ,  ವಿಶಾಲ್ ಶೆಣೈ , ಉಮೇಶ್ ಪೈ  , ಭಾಸ್ಕರ್ ಶೆಣೈ  , ದೀಪಕ್ ಭಟ್  , ದಯಾಘನ್ ಭಟ್ ಹಾಗೂ  ವಿಶ್ವನಾಥ್ ಭಟ್  , ವಸಂತ ಕಿಣೆ  , ಗಣೇಶ್ ಕಿಣಿ  ,  ಆಡಳಿತ ಮಂಡಳಿಯ ಸದಸ್ಯರು  , ಜಿ ಎಸ್  ಬಿ  ಯುವಕ ಮಂಡಳಿ  , ಭಗಿನಿ ವೃಂದ  , ಜಿ ಎಸ್ ಬಿ ಮಹಿಳಾ ಮಂಡಳಿ  , ಶತಮಾನೋತ್ತರ ರಜತ ಭಜನಾ ಮಹೋತ್ಸವ ಸಮಿತಿಯ ಸದಸ್ಯರು ಸಹಕರಿಸಿದರು.  

LEAVE A REPLY

Please enter your comment!
Please enter your name here