ಸ್ವರಾಜ್ಯ ೭೫ ತಂಡ ದ 35ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮ , ಜೊತೆಯಾದ ರಾಷ್ಟ್ರೀಯ ಸೇವಾ ಯೋಜನೆ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜು ಕುಂದಾಪುರ, ಹಸ್ತ ಚಿತ್ರ ಫೌಂಡೇಶನ್ (ರಿ) ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ, ಕಾಯ೯ಕ್ರಮ ನಮ್ಮೊಂದಿಗೆ (“ಸ್ವರಾಜ್ಯ ೭೫ ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.
ಕಾಯ೯ಕ್ರಮದ ಮೊದಲಿಗೆ ರಾಷ್ಟ್ರ ಧ್ವಜಕ್ಕೆ ಪುಷ್ಪಾಚ೯ನೆಯನ್ನು ಮಾಡಿ ದಿನಕರ ಆರ್ ಶೆಟ್ಟಿ ಬಸ್ರೂರು, ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಗಣ್ಯರು ಪುಷ್ಪಾರ್ಚನೆ ಗೈದರು ಕಾಯ೯ಕ್ರಮ ದಲ್ಲಿ ಭುಜಂಗ ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ರ ಕೊಡುಗೆಯೊಂದಿಗೆ ಮೊಳಹಳ್ಳಿ ಮಹಾಬಲ ಹೆಗ್ಡೆ ಸೇವೆ ವಿಚಾರವನ್ನು ಶ್ರೀಮತಿ ಭಾಗ್ಯ ಹೆಚ್ ಜೆ ಪ್ರಸ್ತುತಪಡಿಸಿದರು.
ಗಣ್ಯರಾಗಿ ಡಾ.ಚೇತನ್ ಶೆಟ್ಟಿ ಕೋವಾಡಿ,ಶ್ರೀ ಸುಬ್ರಹ್ಮಣ್ಯ ಶೆಟ್ಟಿ,ಶ್ರೀ ವಿಶ್ವನಾಥ ಶೆಟ್ಟಿ, ಕುಮಾರಿ ದೀಪಾ ಪೂಜಾರಿ,ಶ್ರೀಮತಿ ಸವಿತಾ ಕೆ ಹೆಗ್ಡೆ ವಿಚಾರ ಹಂಚಿಕೊಂಡರು
ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ವಹಿಸಿದ್ದರು.
ಕಾಯ೯ಕ್ರಮದಲ್ಲಿ ಶಿವರಾಜ್ ಶೆಟ್ಟಿ ಹಳ್ನಾಡು ,ರಾಷ್ಟ್ರೀಯ ಸೇವಾ ಯೋಜನೆ . ಘಟಕದ ವಿಧ್ಯಾಥಿ೯ಗಳು, ಕುಟುಂಬಸ್ಥರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಕಾಯ೯ಕ್ರಮದಲ್ಲಿ ಪ್ರಾಥ೯ನೆಯನ್ನು ಶೃದ್ಧಾ ಕೋಣಿ, ಕುಮಾರಿ ಪವಿತ್ರ ಪೈ ರಾಷ್ಟ್ರ ಭಕ್ತಿ ಗೀತೆಯನ್ನು ವಿದ್ಯಾರ್ಥಿನಿಯರು ಹಾಡಿದರು.
ಪ್ರಾಸ್ತಾವಿಕ ವಿಚಾರವನ್ನು ಕಾಯ೯ಕ್ರಮ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು.ನಿರೂಪಣೆಯನ್ನು ಕುಮಾರಿ ಅನುಶ್ರೀ ಜಡ್ಕಲ್ , ಧನ್ಯವಾದವನ್ನು ಪ್ರವೀಣ್ ಗಂಗೊಳ್ಳಿ ಧನ್ಯವಾದವನ್ನು ನಡೆಸಿದರು.