
ಉಡುಪಿ: ನಗರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿಯ ದಶಮಿ ದಿನದ ಅಂಗವಾಗಿ ಚಂಡಿಕಾ ಯಾಗ ಹಾಗೂ ಸಮಾರಾಧನೆ ಭಕ್ತಿಭಾವದಿಂದ ನೆರವೇರಿತು.
ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕರಾದ ರವೀಂದ್ರ ಭಟ್ ಮತ್ತು ವಿನಾಯಕ ಭಟ್ ಅವರು ಚಂಡಿಕಾ ಯಾಗದ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಅರ್ಚಕರಾದ ದೀಪಕ್ ಭಟ್, ದಯಾಘನ್ ಭಟ್, ಗಿರೀಶ್ ಭಟ್ ಸೇರಿದಂತೆ ಇತರರು ಪೂಜಾ ಕಾರ್ಯಗಳಿಗೆ ಸಹಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ್ ನಾಯಕ್ ದಂಪತಿ ಚಂಡಿಕಾ ಯಾಗದ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು.
ನವರಾತ್ರಿ ದಶಮಿಯ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ, ಸಾಮೂಹಿಕ ನಮಸ್ಕಾರ, ಪೂರ್ಣಾಹುತಿ, ಮಹಾಪೂಜೆ, ಪಲ್ಲ ಪೂಜೆ ಹಾಗೂ ಸಮಾರಾಧನೆ ನಡೆಯಿತು. ಶ್ರೀ ಶಾರದಾ ದೇವಿಗೆ ಅರ್ಪಿಸಲಾದ ಸೀರೆಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ಭಕ್ತರಿಗೆ ವಿತರಿಸಲಾಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್, ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ಪ್ರಭು, ಡಾ. ಕೈಲಾಸನಾಥ ಶೆಣೈ, ಉಮೇಶ್ ಪೈ, ಅಶೋಕ್ ಬಾಳಿಗ, ದಿನೇಶ್ ಪೈ, ಡಾ. ವಿನಾಯಕ ಶೆಣೈ, ಸುಭಾಸ್ ಮಧುಕರ್ ಕಾಮತ್, ವೆಂಕಟೇಶ್ ಭಟ್, ಪ್ರಭಾಕರ್ ಭಟ್, ಮಹೇಶ್ ಶೆಣೈ, ಮಟ್ಟಾರ್ ವಸಂತ್ ಕಿಣಿ, ಚಿತ್ತರಂಜನ್ ಭಟ್ ಹಾಗೂ ಹರಿರಾಮ್ ಶೆಣೈ ಉಪಸ್ಥಿತರಿದ್ದರು.
ಭಜನಾ ಮಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಭಾಸ್ಕರ್ ಶೆಣೈ, ಪಿ.ವಿ. ಶೆಣೈ, ಅಲೆವೂರು ಗಣೇಶ್ ಕಿಣಿ, ಶಾಂತರಾಮ ಪೈ, ಜಿ.ಎಸ್.ಬಿ. ಯುವಕ ಮಂಡಳಿಯ ಸದಸ್ಯರು, ಭಗಿನಿ ವೃಂದ, ಜಿ.ಎಸ್.ಬಿ. ಮಹಿಳಾ ಮಂಡಳಿಯ ಸದಸ್ಯರು, ಭಜನಾ ಮಹೋತ್ಸವ ಸಮಿತಿ ಹಾಗೂ ವಿವಿಧ ಸಮಿತಿಗಳ ಸದಸ್ಯರು ಸೇರಿದಂತೆ ಊರಿನ ಮತ್ತು ಪರವೂರಿನ ನೂರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು.
