ಮೂಡುಬಿದಿರೆ: ಇಲ್ಲಿನ ಜೈನಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಮೇ.31ರಂದು ಬೆಳಗ್ಗೆ 8.30ರಿಂದ ಶ್ರುತ ಪಂಚಮಿ ಪ್ರಯುಕ್ತ ಶ್ರುತ ಸ್ಕಂದ ಆರಾಧನೆ ನಡೆಯಲಿದೆ.
ಭಗವಾನ್ 1008 ಶ್ರೀಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ, ಪೂಜೆ, ನವ ದೇವತಾ ಪೂಜೆ, ಗಣಧರ ಪೂಜೆ
ಸರಸ್ವತಿ ಪೂಜೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಶಾಸ್ತçದಾನ, ವಾಣಿ ಅಭಯ ಕುಮಾರ್ ರಚಿಸಿದ ಜೈನ ಶೋಭಾನೆ ಪುಸ್ತಕ ಬಿಡುಗಡೆ, ಮಧ್ಯಾಹ್ನ 2 ಗಂಟೆಯಿಂದ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದು ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.