ಉಪಾಧ್ಯಕ್ಷರಾಗಿ ಕೃಷ್ಣಕಾಂತ್ ನಾಯಕ್ ಮುನಿಯಾಲು ಆಯ್ಕೆ
ವರಂಗ : ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಶುಭದರ ಶೆಟ್ಟಿ ಮುದ್ರಾಡಿ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಕಾಂತ್ ನಾಯಕ್ ಮುನಿಯಾಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಕಳದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಮಿತ್ರಾ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಬಳಿಕ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷ ವರಂಗ ಲಕ್ಷ್ಮಣ ಆಚಾರ್ ಅವರು ನೂತನ ಅಧ್ಯಕ್ಷ ಶುಭದರ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪಡುಕುಡೂರು ಜಗದೀಶ ಹೆಗ್ಡೆ, ಚಂದ್ರಶೇಖರ ಬಾಯರಿ ಕಬ್ಬಿನಾಲೆ, ಗೋಪಿನಾಥ ಭಟ್ ಮುನಿಯಾಲು, ಕೃಷ್ಣ ಆಚಾರ್ಯ ಮುದ್ರಾಡಿ, ಸುಧನ್ವ ಪಾಣಾರ ಮುದ್ರಾಡಿ, ಸುರೇಶ್ ಶೆಟ್ಟಿಗಾರ್ ಮುದ್ರಾಡಿ, ಇಂದಿರಾ ಪೂಜಾರಿ ವರಂಗ, ಶಶಿಕಲಾ ಡಿ. ಪೂಜಾರಿ ಹಾಗೂ ಸುರೇಶ್ ನಾಯ್ಕ್ ಮುನಿಯಾಲು (ಚಟ್ಕಲ್ ಪಾದೆ) ಉಪಸ್ಥಿತರಿದ್ದರು.
ಸಂಘದ ಮೇಲ್ವಿಚಾರಕ ಜಯಂತ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಗೋಪಾಲ ಕೃಷ್ಣ ಪೈ, ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ, ಜಯಕರ ಶೆಟ್ಟಿ ಮುದ್ರಾಡಿ, ಪಾಂಡುರಂಗ ಪ್ರಭು ಮುದ್ರಾಡಿ, ದಿನೇಶ್ ಶೆಟ್ಟಿ ಹೆಬ್ರಿ, ಪ್ರಸನ್ನ ಶೆಟ್ಟಿ ಪಡುಕುಡೂರು, ಹರೀಶ ಶೆಟ್ಟಿ ನಾಡ್ಪಾಲು, ಸತೀಶ್ ಸೇರಿಗಾರ್, ರಘುನಾಥ ಪೂಜಾರಿ ಮುನಿಯಾಲು ಸೇರಿದಂತೆ ಮುದ್ರಾಡಿ ಹಾಗೂ ಮುನಿಯಾಲು ಭಾಗದ ಪ್ರಮುಖರು, ಸಂಘದ ಸಿಬ್ಬಂದಿ ವರ್ಗ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು

