ಟೀಮ್ ವೀರಕಂಭ ಆಶ್ರಯದಲ್ಲಿ ಸಿಂಧೂರ್ ಟ್ರೋಫಿ ಕ್ರಿಕೆಟ್ ಪಂದ್ಯಾಟ

0
57

ಬಂಟ್ವಾಳ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಟೀಮ್ ವೀರಕಂಭ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಸಿಂಧೂರ್ ಟ್ರೋಫಿ ದಿನಾಂಕ 25-05-2025 ನೇ ಆದಿತ್ಯವಾರ ವೀರಕಂಭ ಗ್ರಾಮದ ನಂದನತಿಮಾರ್ ಕ್ರಿಕೆಟ್ ಮೈದಾನದಲ್ಲಿ ಜರಗಲಿರುವುದು.

ಪಂದ್ಯಾಟದ ಉದ್ಘಾಟನೆಗೆ ಮೊದಲು ಭಯೋತ್ಪಾದಕರ ದಾಳಿಯಿಂದ ಮರಣ ಹೊಂದಿದ ಭಾರತೀಯರಿಗೆ ಗೌರವ ಶ್ರದ್ಧಾಂಜಲಿ ಹಾಗೂ ಯಶಸ್ವಿ ಸಿಂಧೂರ ಆಪರೇಷನ್ ನಲ್ಲಿ ವೀರಮರಣ ಹೊಂದಿದ ಐದು ಮಂದಿ ಭಾರತೀಯ ಸೈನಿಕರಿಗೆ ಪುಷ್ಪಾರ್ಚನೆ ಕಾರ್ಯಕ್ರಮ ನೆರವೇರಲಿದ್ದು, ವೀರಕಂಭ ಗ್ರಾಮ ವ್ಯಾಪ್ತಿಯ ದೇಶಾಭಿಮಾನಿಗಳು , ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here