ತುಳು ಸಿನಿರಂಗಕ್ಕೆ ಮೊದಲ ಬಾರಿಗೆ ಸ್ವರ ನೀಡಿದ ಗಾಯಕ ವಿದ್ಯಾಭೂಷಣ್!

0
193

ಪಿದಾಯಿ ತುಳು ಚಿತ್ರಕ್ಕೆ ಭಕ್ತಿರಸದಿಂದ ಕೂಡಿದ ಚಿತ್ರಗೀತೆ; ಅಮೋಘ ಭಕ್ತಿ ಗಾಯನದಿಂದ ಕನ್ನಡಿಗರ ಮನಸೂರೆಗೊಳಿದ್ದ ಪ್ರಖ್ಯಾತ ಗಾಯಕ

ವಿದ್ಯಾಭೂಷಣ್ ಒಬ್ಬ ಪ್ರಸಿದ್ಧ ಕರ್ನಾಟಕ ಸಂಗೀತಕಾರರು. ಅವರನ್ನು ಹೆಚ್ಚಾಗಿ ಆಕರ್ಷಿಸಿದ್ದು, ’ದಾಸವರೇಣ್ಯ ಪುರುಂದರದಾಸರ ರಚನೆಗಳು’. ಅವರು ’ಹರಿದಾಸ ಸಾಹಿತ್ಯ’ದಲ್ಲೂ ಅಷ್ಟೇ ಆಸಕ್ತಿಯನ್ನು ಹೊಂದಿದ್ದಾರೆ. ಮೊದಲೂ ಶಾಸ್ತ್ರೀಯ ಸಂಗೀತದ ಶೈಲಿಯಲ್ಲಿ ಹಲವಾರು ‘ಅಪರೂಪದ ದಾಸರ ಕೃತಿ’ಗಳನ್ನು ಹಾಡಿ ‘ದಾಸಸಾಹಿತ್ಯ’ವನ್ನು ಪ್ರಸಿದ್ಧಪಡಿಸಿದ್ದಾರೆ. ಈಗಾಗಲೇ ‘ನೂರಾರು ಧ್ವನಿಮುದ್ರಿತ ಆಲ್ಬಮ್’ ಗಳು ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಭಾರತದ ಹಲವು ಕಡೆಗಳಲ್ಲಿ ಅಲ್ಲದೆ ವಿದೇಶಗಳಲ್ಲೂ ಅವರ ಗಾಯನ ಪ್ರಸಿದ್ಧಿಪಡೆದಿದೆ. ಸುಮಾರು ಎರಡು ದಶಕಗಳಿಂದ ‘ಶಾಸ್ತ್ರೀಯ ಗಾಯನ’ದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ತುಳುಚಿತ್ರವೊಂದಕ್ಕೆ ಸ್ವರ ನೀಡಿದ್ದಾರೆ.

ಹಲವು ಕಡೆ ಪ್ರಶಸ್ತಿ ಪಡೆದು ಸಖತ್ ಸುದ್ದಿಯಲ್ಲಿರುವ ಬಹುನಿರೀಕ್ಷಿತ ತುಳು ಚಿತ್ರ “ಪಿದಾಯಿ” ಸೆ.12 ರಂದು ತೆರೆಗೆ ಬರಲಿದೆ. ನಮ್ಮ ಕನಸು ಬ್ಯಾನರ್ ಅಡಿಯಲ್ಲಿ ಕೆ ಸುರೇಶ್ ನಿರ್ಮಿಸಿ, ರಮೇಶ್ ಶೆಟ್ಟಿಗಾರ್ ಬರೆದು, ಸಂತೋಷ್ ಮಾಡ ನಿರ್ದೇಶಿಸಿದ ಚಿತ್ರವಿದು. ಈಗಾಗಲೇ ಕೋಲ್ಕತ್ತಾ, ಶಿಮ್ಲಾ, ಜಾರ್ಖಂಡ್ ಮತ್ತು ಕ್ಯಾಲಿಫೋರ್ನಿಯಾ ಸೇರಿದಂತೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತವಾಗಿ ಆಯ್ಕೆಯಾಗುವ ಮೂಲಕ ಪಿದಾಯಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ಚಿತ್ರ. ಈ ಚಿತ್ರಕ್ಕೆ ಪ್ರಸಿದ್ದ ಭಕ್ತಿಗಾನ ಗಾಯಕ ವಿದ್ಯಾಭೂಷಣ್ ಸ್ವರ ನೀಡಿದ್ದು, ಚಿತ್ರದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

LEAVE A REPLY

Please enter your comment!
Please enter your name here