ತೋಟ ಸ್ವಚ್ಛಗೊಳಿಸುವ ವೇಳೆ ಅಸ್ಥಿಪಂಜರ ಪತ್ತೆ

0
126

ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮದ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯ ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆ ನಡೆದಿದೆ.

ನಾಲ್ಕೂರು ಗ್ರಾಮದ ಪಾಡಿ ನಿವಾಸಿ ವಿನೋದ್ ಅವರ ಕೃಷಿ ತೋಟದ ಕಣಿಯ ಬಳಿ ತಲೆಬುರುಡೆ, ಎಲುಬುಗಳು ಹಾಗೂ ವಸ್ತ್ರಗಳೊಂದಿಗೆ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ.

ವಿನೋದ್ ಅವರ ಜಾಗವನ್ನು ನಾಲ್ಕೂರು ಗ್ರಾಮದ ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಅವರು ನೋಡಿಕೊಳ್ಳುತ್ತಿದ್ದರು. ಸೆ. 28ರಂದು ತೋಟವನ್ನು ಯಂತ್ರದ ಮೂಲಕ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಅಸ್ಥಿಪಂಜರ ಕಂಡುಬಂದಿದೆ.

ತಕ್ಷಣ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ವೇಣೂರು ಠಾಣಾ ಪೊಲೀಸರು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ಥಿಪಂಜರ ಯಾರದ್ದು ಹಾಗೂ ಸಾವಿಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.