ಗೌಡ ಸಾರಸ್ವತ ಸಮಾಜಕ್ಕೆ ಅಮಿತಾ ಪೈ ಅಧ್ಯಕ್ಷರಾಗಿ ಪುನರಾಯ್ಕೆ

0
26

ದಾವಣಗೆರೆ : ದಾವಣಗೆರೆಯ ಗೌಡ ಸಾರಸ್ವತ ಸಮಾಜದ ಇತ್ತೀಚಿಗೆ ನಗರದ ಎಂ.ಸಿ.ಸಿ.`ಎ’ ಬ್ಲಾಕ್‌ನಲ್ಲಿರುವ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಸರ್ವ ಸದಸ್ಯರ ಮಹಾಸಭೆಯಯಲ್ಲಿ ಸಮಾಜದ ಎಲ್ಲರ ಸರ್ವಾನುಮತದಿಂದ ಅಮಿತಾ ಡಾ.ವೇಣುಗೋಪಾಲ್ ಪೈಯವರು ಸಮಾಜದ ಅಧ್ಯಕ್ಷರಾಗಿ ಪನರಾಯ್ಕೆಯಾಗಿದ್ದಾರೆ ಎಂದು ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಮಣಭಟ್ 2025-26ನೇ ಸಾಲಿನ ವರದಿ ವಾಚನ ಮಾಡಿದರು. ಸಮಾಜದ ಖಜಾಂಚಿ ಆರ್.ವಿ.ಶೆಣೈ 2025-26ನೇ ಸಾಲಿನ ಲೆಕ್ಕಪತ್ರ ಮಂಡನೆ ಮಾಡಿದರು.

2026-28ನೇ ಸಾಲಿನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರು ಅಮಿತಾ ಡಾ.ವೇಣುಗೋಪಾಲ್ ಪೈ, ಉಪಾಧ್ಯಕ್ಷರು ಕೆ.ನಿತ್ಯಾನಂದ ಕಾಮತ್, ಕಾರ್ಯದರ್ಶಿ ಕೆ.ವೆಂಕಟರಮಣಭಟ್, ಖಜಾಂಚಿ ಆರ್.ವಿ.ಶೆಣೈ, ಸಮಿತಿ ಸದಸ್ಯರು ಎಂ.ನರಸಿAಹಕಾಮತ್, ವಿಜಯಾನಂದ ಭಟ್, ಗಾಯತ್ರಿ ಬಾಳಿಗ, ಉಷಾ ವಾಲವಾಲ್ಕರ್, ಕೀರ್ತಿ ಜಿ.ಕಿಣಿ, ಗಣೇಶ್ ಜಿ.ತಿಳ್ವೆ ಆಯ್ಕೆಯಾದರು.

ಅನುರಾದ ಕಾಮತ್‌ರವರು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಗಣೇಶ್ ಜಿ.ತಿಳ್ವೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೀರ್ತಿ ಜಿ. ಕಿಣಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.