ಪಾಲಿಟೆಕ್ನಿಕ್ ನ ಎನ್.ಎಸ್.ಎಸ್ ಘಟಕದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮಗಳಲ್ಲಿ ಒಂದಾಗಿರುವ ತಾಂತ್ರಿಕ ಸೇವಾ ಕಾರ್ಯಕ್ರಮ ದ ಮೊದಲ ಹಂತವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗಲ್ಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಡೇಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ , ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರು, ಸರ್ಕಾರಿ ಪ್ರೌಢಶಾಲೆ ಹೊಸಬೆಟ್ಟು ಇಲ್ಲಿ ದಿನಾಂಕ 12/08/2025 ರಂದು ತಾಂತ್ರಿಕ ಸೇವಾ ಕಾರ್ಯಕ್ರಮ ನಡೆಸಲಾಯಿತು.
ಸುಮಾರು 30 NSS ಸ್ವಯಂ ಸೇವಕರ ತಂಡ ಈ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶಾಲೆಗಳಲ್ಲಿ ಎಲೆಕ್ಟ್ರಿಕಲ್ ಗೆ ಸಂಬಂಧಿಸಿದ ಸ್ವಿಚ್ ಬೋರ್ಡ್ ರಿಪೇರಿ, ವಯರಿಂಗ್, ಹೊಸ ಅರ್ತಿಂಗ್, ಬ್ಲಾಕ್ ಬೋರ್ಡ್ ಪೇಂಟಿಂಗ್, ಚಿಕ್ಕ ಪುಟ್ಟ ಸ್ವಚ್ಛತಾ ಕಾರ್ಯ, ಕಂಪ್ಯೂಟರ್ ಸೆಟ್ಟಿಂಗ್ ಇತ್ಯಾದಿ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಅತ್ಯಂತ ಮುತುವರ್ಜಿಯಿಂದ ನಡೆಸಿಕೊಟ್ಟರು.
ಈ ತಂಡಕ್ಕೆ ಸಹಕಾರಿಯಾಗಿ ಮಾರ್ಗದರ್ಶಕರಾಗಿ ನಮ್ಮ ಕಾಲೇಜಿನ ಎನ್.ಎಸ್.ಎಸ್ ನ ಹಿರಿಯ ವಿದ್ಯಾರ್ಥಿಗಳಾದ ಪ್ರಮೋದ್ ಹಾಗೂ ಸಮ್ಯಕ್ ಇವರು ತಮ್ಮ ಕೆಲಸದ ಒತ್ತಡದ ಸಮಯದಲ್ಲೂ ಒಂದು ದಿನದ ರಜೆಯನ್ನು ಹಾಕಿ ನಮ್ಮ NSS ವಿದ್ಯಾರ್ಥಿಗಳೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮುಂದಿನ 2-3 ಹಂತದಲ್ಲಿ ಇನ್ನಷ್ಟು ಶಾಲೆಗಳಿಗೆ ಭೇಟಿ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, SDMC ಅಧ್ಯಕ್ಷರು , ಸದಸ್ಯರು, ಪಾಲಿಟೆಕ್ನಿಕ್ ನ ಪ್ರಾಂಶುಪಾಲರು ಹಾಗು ಎಲ್ಲಾ ಉಪನ್ಯಾಸಕರಿಗೆ ಮತ್ತು NSS ಸ್ವಯಂ ಸೇವಕರಿಗೆ ತುಂಬು ಹೃದಯದ ಧನ್ಯವಾದಗಳು.
ವರದಿ: ರಾಮ್ ಪ್ರಸಾದ್, ಗೋಪಾಲಕೃಷ್ಣ ಕೆ.ಎಸ್.
NSS ಕಾರ್ಯಕ್ರಮಾಧಿಕಾರಿಗಳು,
ಎಸ್. ಎನ್. ಮೂಡಬಿದ್ರೆ ಪಾಲಿಟೆಕ್ನಿಕ್ ಮೂಡುಬಿದಿರೆ.

