ಹಳೆಯಂಗಡಿ: ಜಿಲ್ಲಾ, ರಾಜ್ಯ ಮತ್ತು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ತೋಕೂರು ಹಳೆಯಂಗಡಿ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆ, ತೋಕೂರು ಇಲ್ಲಿ ಏಕ್ ಪೇಡ್ ಮಾ ಕೇ ನಾಮ್ 2025 – 26 ಅಭಿಯಾನದ ಮುಂದುವರಿದ ಭಾಗವಾಗಿ ಸ್ವಚ್ಛತಾ ಶ್ರಮದಾನ ಹಾಗೂ ‘ಉಸಿರಿಗಾಗಿ ಹಸಿರು’ – ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಸ್ವಚ್ಛ ಶಾಲೆ – ಸುಂದರ ಶಾಲೆ ಎಂಬ ಶೀರ್ಷಿಕೆಯಡಿ ಶಾಲಾ ಆವರಣವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡುವ ಉದ್ದೇಶದಿಂದ ಶಾಲೆಯ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.
ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸದಸ್ಯೆಯರು ಸೇರಿ ಗಿಡ ನೆಟ್ಟು ಮುಂದೆ ಅದನ್ನು ಸರಿಯಾದ ರೀತಿಯಲ್ಲಿ ಪೋಷಿಸುವ ಪಣತೊಡಲಾಯಿತು. ಶ್ರಮದಾನದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಸದಸ್ಯ ಸಂತೋಷ್ ಕುಮಾರ್, ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಧಿಕಾರಿ ಜಗದೀಶ್ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರ ಸುವರ್ಣ, ಕ್ರೀಡಾ ಕಾರ್ಯದರ್ಶಿ ಗೌತಮ್ ಬೆಲ್ಚೆಡ್, ಕ್ರಿಕೆಟ್ ತಂಡದ ಉಪನಾಯಕ ಸಚಿನ್ ಆಚಾರ್ಯ,ಮಹಿಳಾ ಕಾರ್ಯಾಧ್ಯಕ್ಷೆ ಸುರೇಖಾ ಕಲ್ಲಾಪು, ಮಹಿಳಾ ಕಾರ್ಯದರ್ಶಿ ಶೈಲ ಶೆಟ್ಟಿಗಾರ್, ನಿಕಟ ಪೂರ್ವ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಚಂದ್ರಶೇಖರ್ ದೇವಾಡಿಗ, ಸೋಮನಾಥ್ , ಮಾ. ಅಹನ್ ಸುವರ್ಣ ಮತ್ತಿತರರು ಪಾಲ್ಗೊಂಡರು.

