ಕಾಸರಗೋಡು :ಅಗ್ರಗಣ್ಯ ಸಾಹಿತಿ ದಿ. ಬೇಕಲ ರಾಮನಾಯಕ ಸದ್ಭಾವನಾ ಪ್ರಶಸ್ತಿ 2025.ಮಂಗಳೂರಿನ ಸಮಾಜಸೇವಕ, ಸಂಘಟಕ ಡಾ. ರವೀಂದ್ರ ಜೆಪ್ಪು ಇವರೀಗೆ ಲಭಿಸಿದೆ. ಸಾಹಿತಿ ಬೇಕಲ ರಾಮನಾಯಕರ ನಾಮ ಸ್ಮರಣೆಗಾಗಿ ಕಾಸರಗೋಡು ಕನ್ನಡ ಭವನ ಈ ಪ್ರಶಸ್ತಿಯನ್ನು ಕೊಡಮಾಡುತ್ತದೆ. ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ,ದ ಬಯಲು ರಂಗ ಮಂಟಪದಲ್ಲಿ ನಡೆದ ಸಾಹಿತಿ ದಿ. ಬೇಕಲ ರಾಮನಾಯಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಶಾಲು, ಹಾರ ಹಾಕಿ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಡಾ. ರವೀಂದ್ರ ಜೆಪ್ಪು ಅವರೀಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಅಧ್ಯಕ್ಷರಾದ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷರಾಗಿದ್ದರು. ಸಾಮಾಜಿಕ ಮುಂದಾಳು ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ, ಕೊಡಗು ಕನ್ನಡ ಭವನ ಅಧ್ಯಕ್ಷ ಬೋಲಿಜಿರ ಬಿ. ಅಯ್ಯಪ್ಪ, ಕೊಡಗು ಕನ್ನಡ ಚು. ಸಾ. ಪ. ಅಧ್ಯಕ್ಷೆ ರುಬೀನ ಎಂ. ಎ., ಸಾಹಿತಿ ಡಾ. ಕೊಲಚಪ್ಪೆ ಗೋವಿಂದ ಭಟ್, ಕಾಸರಗೋಡು ಜಿಲ್ಲಾ ಕನ್ನಡ ಚು. ಸಾ. ಪ. ಅಧ್ಯಕ್ಷ ವಿರಾಜ್ ಅಡೂರ್, ಕನ್ನಡ ಭವನ ಗೌರವ ಅಧ್ಯಕ್ಷ ಪತ್ರಕರ್ತ ಪ್ರದೀಪ್ ಬೇಕಲ್, ದೇವರಾಜ್ ಸೂರಂಬೈಲ್, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ, ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ, ಮುಂತಾದವರಿದ್ದರು. ಕನ್ನಡ ಭವನ ನಿರ್ದೇಶಕರಾದ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರ್ವಹಿಸಿದರು ಉಪಾಧ್ಯಕ್ಷ ಪ್ರಕಾಶ್ ಚಂದ್ರ ಸ್ವಾಗತಿಸಿ ಗಿರೀಶ್ ಪಿ ಎಂ ವಂದಿಸಿದರು.