ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಆಸರೆ

0
116

ಮಣಿಪಾಲ : ಶಾಂತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜಸ್ಥಾನ ಮೂಲದ, ಗಂಭೀರ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು, ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಮಂಗಳವಾರ ನಡೆದಿದೆ.

ಕಾರ್ಯಚರಣೆಗೆ ಶಂಕರ ಭಂಡಾರಿ ನೆರವಾಗಿದ್ದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಅಸಹಾಯಕತೆಯಿಂದ ಚಿಕಿತ್ಸೆಗೆ ಒಳಪಡೆದು ಮನೆಯಲ್ಲಿದ್ದರು. ಇವಾಗ ವೃದ್ಧೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೆಸರು ಫಾತಿಮಾ ಪಕ್ರುದ್ದೀನ್(70ವ) ಎಂದು ತಿಳಿದುಬಂದಿದೆ. ವೃದ್ಧೆಗೆ ಸಂಬಂಧಿಕರು ಉಡುಪಿಲ್ಲಿ ಇಲ್ಲದಿರುವುದುರಿಂದ ತುರ್ತಾಗಿ ಸಾಮಾಜದ ಸಂಘ ಸಂಸ್ಥೆಗಳು ನೆರವಿಗೆ ಬರುವಂತೆ ಒಳಕಾಡುವರು ವಿನಂತಿಸಿಕೊಂಡಿದ್ದಾರೆ.