ಅಕ್ಷಯ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ಮಾಸ್ಟರಿಸೆಷನ್ ಯಶಸ್ವಿ

0
9

ಪುತ್ತೂರಿನ ಅಕ್ಷಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ, ಬೈಟ್‌ಬ್ಲಿಟ್ಜ್ಐಟಿ ಕ್ಲಬ್ ಹಾಗೂ ಐಕ್ಯೂಎಸಿಸಹಯೋಗದಲ್ಲಿ “ಕ್ಲಾಸ್ ರೂಮ್‌ನಿಂದ ಉದ್ಯೋಗ ಜೀವನದತ್ತ – ಭವಿಷ್ಯಕ್ಕೆಸಿದ್ಧರಾಗಿ” ಎಂಬ ಆಶಯದೊಂದಿಗೆ ಸಾಫ್ಟ್ ಸ್ಕಿಲ್ಸ್ಮಾಸ್ಟರಿಸೆಷನ್ಕಾರ್ಯಕ್ರಮವು ಮೇ 8 ಮತ್ತು 9 ರಂದು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ವೃತ್ತಿಪರ ತರಬೇತುದಾರರಾದರಾಚ್ಮಾನ್ಸಿಂಗ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ, ವೃತ್ತಿಪರ ವ್ಯಕ್ತಿತ್ವ ವಿಕಾಸ, ಕ್ರಿಟಿಕಲ್ಥಿಂಕಿಂಗ್, ತಂಡದ ಕೆಲಸ, ಭಾವನಾತ್ಮಕ ಬುದ್ಧಿಮತ್ತೆ ಹಾಗೂ ಉದ್ಯೋಗ ಸಿದ್ಧತೆ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಅವರು ವಿದ್ಯಾರ್ಥಿಗಳಿಗೆ ಕೇವಲ ಪದವಿ ಪಡೆಯುವುದಷ್ಟೇಸಾಕಾಗುವುದಿಲ್ಲ; ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ, ಪ್ರಾಯೋಗಿಕ ಜ್ಞಾನ ಹಾಗೂ ಉತ್ತಮ ಸಂವಹನ ಕೌಶಲ್ಯ ಅಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಚಟುವಟಿಕೆಗಳಲ್ಲಿತೊಡಗಿಸಿಕೊಂಡರು. ಈ ಕಾರ್ಯಕ್ರಮವುವಿದ್ಯಾರ್ಥಿಗಳಲ್ಲಿ ವೃತ್ತಿ ಅರಿವು ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪ್ರೇರಣೆ ನೀಡಿತು.

ಕಾಲೇಜಿನ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಸಂಯೋಜಕರು ಹಾಗೂ ಉಪನ್ಯಾಸಕರುಉಪಸ್ಥಿತರಿದ್ದುಕಾರ್ಯಕ್ರಮದಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಯಿತು.

LEAVE A REPLY

Please enter your comment!
Please enter your name here