ಆಳ್ವಾಸ್‌ನಲ್ಲಿ ಸೌಮ್ಯ ತಿಲಕ್ ಶೆಟ್ಟಿ ಅವರ ‘ಮಸಿಯ ಮಾತು’ ಕವನ ಸಂಕಲನ ಬಿಡುಗಡೆ

0
7

ಮೂಡುಬಿದಿರೆ : ಮಿಜಾರಿನ ಹವ್ಯಾಸಿ ಬರಹಗಾರ್ತಿ ಸೌಮ್ಯ ತಿಲಕ್ ಶೆಟ್ಟಿ ಅವರ ಚೊಚ್ಚಲ ಕವನ ಸಂಕಲನ ‘ಮಸಿಯ ಮಾತು’ ಇತ್ತೀಚೆಗೆ (ಜೂನ್ 26) ಇಲ್ಲಿನ ಆಳ್ವಾಸ್ ಸ್ವಾಯತ್ತ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಭಾರಂಭಗೊಂಡಿತು. ಸಾಂಸ್ಕೃತಿಕ ಧುರೀಣ ಡಾ. ಎಂ. ಮೋಹನ ಆಳ್ವ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಡಾ. ಎಂ. ಮೋಹನ ಆಳ್ವರ ಮುನ್ನುಡಿ ಹಾಗೂ ವಿಜಯಕುಮಾರ್ ಜೈನ್ ಅವರ ಬೆನ್ನುಡಿಯೊಂದಿಗೆ ಹೊರಬಂದಿರುವ ಈ ಕೃತಿಯು ಆಕರ್ಷಕ ಮುಖಪುಟ ಹಾಗೂ ಮೌಲ್ಯಯುತ ವಿಷಯಗಳಿಂದ ಗಮನ ಸೆಳೆಯುತ್ತದೆ. ಒಟ್ಟು 120 ಪುಟಗಳ ಈ ಸಂಕಲನದ ಬೆಲೆ ₹150 ಆಗಿದೆ.

ಸರಳತೆಯಲ್ಲಿ ಅರಳಿದ ಕಾವ್ಯ ಬಂಧ: ದೈನಂದಿನ ಜೀವನದ ಅನುಭವಗಳನ್ನು ತೀರ ಸರಳ ಹಾಗೂ ಸುಲಲಿತ ಶೈಲಿಯಲ್ಲಿ ಅಕ್ಷರರೂಪಕ್ಕೆ ತಂದಿರುವುದು ಈ ಕೃತಿಯ ಮುಖ್ಯ ಶಕ್ತಿ. ಅಮ್ಮನ ವಾತ್ಸಲ್ಯ, ಅಪ್ಪನ ರಕ್ಷಣೆ, ಕುಟುಂಬದ ಬಾಂದವ್ಯ ಹಾಗೂ ತುಳುನಾಡಿನ ವೈಭವೋಪೇತ ಸಂಸ್ಕೃತಿಯನ್ನು ಕವಯಿತ್ರಿ ಆಪ್ತವಾಗಿ ನಿರೂಪಿಸಿದ್ದಾರೆ.


ವಿವಿಧ ಕಾವ್ಯ ಪ್ರಯೋಗಗಳು:
ಸಂಕಲನದಲ್ಲಿ ಚುಟುಕ, ಹಾಯ್ಕು, ಮುಕ್ತಕ, ಷಟ್ಪದಿ, ವಚನ, ಲಿಮೆರಿಕ್ ಹಾಗೂ ಚಿತ್ರಕವನಗಳಂತಹ ವಿಭಿನ್ನ ಪ್ರಯೋಗಗಳನ್ನು ಕಾಣಬಹುದು. ಚೊಚ್ಚಲ ಪ್ರಯತ್ನದಲ್ಲೇ ಕವಯಿತ್ರಿಯ ಸಾಹಿತ್ಯಿಕ ಆಸಕ್ತಿ ಮತ್ತು ಭರವಸೆಯ ಸಾಲುಗಳು ಎದ್ದು ಕಾಣುತ್ತವೆ. ಭಕ್ತಿ, ಪ್ರಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಈ ಕೃತಿಯು ಸರಳ ಸಾಹಿತ್ಯ ಪ್ರಿಯರ ಮನ ತಲುಪುವಂತಿದೆ.


ಕವಯಿತ್ರಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಪಕ್ವ ಹಾಗೂ ಆಳವಾದ ಕೃತಿಗಳು ಮೂಡಿಬರಲಿ ಎಂದು ಸಾಹಿತ್ಯಾಭಿಮಾನಿ . ಬೆಂಗಳೂರು ನಿವಾಸಿ ಹರೀಶ ಡೋಂಗ್ರೆ, ಮಾಳ ಹಾರೈಸಿದ್ದಾರೆ.

ವರದಿ-ಮಂದಾರ ರಾಜೇಶ್