ಮಂಗಳೂರು ರಾಮಕೃಷ್ಣ ಮಠದ ಆಶ್ರಯದಲ್ಲಿ ಪ್ರಬೋಧ 26 ಕಾರ್ಯಕ್ರಮದ ಅಡಿ ವಿಶೇಷ ಎರಡು ದಿನದ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿದೆ. ಅಮೆರಿಕದ ನ್ಯೂಯಾರ್ಕ್ ನ ವೇದಾಂತ ಸೊಸೈಟಿಯ ಸ್ವಾಮಿ ಸರ್ವ ಪ್ರಿಯಾನಂದಜಿ ನವೆಂಬರ್ 21ರಂದು ಮಂಗಳಾದೇವಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 12ರ ವರೆಗೆ, ಸಂಜೆ ಐದರಿಂದ ಏಳರವರೆಗೆ ಸುರತ್ಕಲ್ ಎನ್ಐಟಿಕೆಯಲ್ಲಿ.
ಮರುದಿನ 22ರಂದು ಬೆಳಗ್ಗೆ 10ರಿಂದ 12ರ ತನಕ, ಮಧ್ಯಾಹ್ನ 2ರಿಂದ 4ರ ತನಕ, ಸಂಜೆ 6 ರಿಂದ 8 ರ ತನಕ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ, ಚಿಂತನ ಉಪನ್ಯಾಸ ಮಾಲಿಕೆಯನ್ನು ನಡೆಸಿಕೊಡಲಿದ್ದಾರೆ. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ವೆಬ್ಸೈಟ್ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕೆಂದು ಕೇಳಿಕೊಂಡಿರುತ್ತಾರೆ.
