ಮೂಡುಬಿದಿರೆ : ಶ್ರಾವಣ ಮಾಸದ ಮಂಗಳವಾರದ ಅಂಗವಾಗಿ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಯವರ ಪಟ್ಟದ ಕುಲದೇವಿ ಶ್ರೀ ಕುಷ್ಮಾಂಡಿನೀ ದೇವಿಗೆ ವಿಶೇಷ ಪೂಜಾ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸೆ.8ರಂದು ಭಕ್ತಿಭಾವದಿಂದ ನೆರವೇರಿದವು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದೇವಿಗೆ ಷೋಡಶೋಪಚಾರ, ಅಷ್ಟಾವಧಾನ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. 108 ಕಮಲ ಪುಷ್ಪಗಳನ್ನು ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹರಿಣಿ ಪದ್ಮರಾಜ್, ಅವರ ಸಹೋದರ ಶಂಭವ ಕುಮಾರ್, ರಾಜೇಶ್ವರಿ, ಸಂಜಯಂತ ಕುಮಾರ್ ಶೆಟ್ಟಿ ಸೇರಿದಂತೆ ನೂರಾರು ಭಕ್ತರು ಸಾಮೂಹಿಕ ಪೂಜೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ಶ್ರಾವಣ ಮಾಸದ ವಿಶೇಷ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ವಾತಾವರಣಕ್ಕೆ ಸಾಕ್ಷಿಯಾದರು. ಸಾಮೂಹಿಕ ಪೂಜೆಯ ಮೂಲಕ ಭಕ್ತರು ಪುಣ್ಯಲಾಭ ಪಡೆದರು.

