ಜೆಸಿಐ ಕುಂದಾಪುರ ಘಟಕದ ಆಥಿತ್ಯದಲ್ಲಿ ವಲಯ 15ರ ತರಬೇತಿ ಕಾರ್ಯಗಾರ ಸ್ಪೀಚ್ ಕ್ರಾಫ್ಟ್ -2025

0
134

ಭಾರತೀಯ ಜೇಸಿಸ್ ನ ವಲಯ 15ರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಕುಂದಾಪುರ ಘಟಕದ ಆಥಿತ್ಯದಲ್ಲಿ ವಲಯ 15ರ ತರಬೇತಿ ಕಾರ್ಯಗಾರ ಸ್ಪೀಚ್ ಕ್ರಾಫ್ಟ್ -2025 ಕೋಟೇಶ್ವರದ ಸಹನ ಕನ್ವೇಷನ್ ನ ಸುಮುಖ ಮಿನಿ ಹಾಲ್ ನಲ್ಲಿ ಜರುಗಿತು.
ವಲಯ 15ರ ವಲಯಾಧ್ಯಕ್ಷ ಜೆ ಸಿ ಸೆನೆಟರ್ ಅಭಿಲಾಶ್ ಬಿ ಎ ಕಾರ್ಯಗಾರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿ ಸಂದೀಪ್ ಕುಮಾರ್ ಎನ್ ಅತಿಥಿಗಳಾಗಿ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಕಾಲೇಜ್ ನ ಚೇರ್ಮನ್ ಜೇಸಿ ಸೆನೆಟರ್ ರಾಘವೇಂದ್ರ ಹೊಳ್ಳ ನಿಕಟ ಪೂರ್ವ ವಲಯಾಧ್ಯಕ್ಷರಾದ ಜೆಸಿ ಸೆನೆಟರ್ ಗಿರೀಶ್ ಎಸ್ ಪಿ, ವಲಯ ಉಪಾಧ್ಯಕ್ಷರಾದ ಜೆಸಿ ಅನ್ವೇಶ್ ಶೆಟ್ಟಿ, ಮುಖ್ಯ ತರಬೇತುರಾದ ಜೇಸಿ ಸತ್ಯನಾರಾಯಣ ರಾವ್ ಸಹ ತರಬೇತುರಾದ ಜೇಸಿ ಅಕ್ಷತಾ ಶೆಟ್ಟಿ ಹಾಗೂ ಜೇಸಿ ರಾಜೇಶ್ವರಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯ ತರಬೇತಿ ವಿಭಾಗದ ಸಂಯೋಜಕರಾದ ಜೆಸಿ ಹರಿಣಾಕ್ಷಿ ಕರ್ಕೇರ ಸಭಾಧ್ಯಕ್ಷತೆಯನ್ನು ವಹಿಸಿದ್ದರು ಆತಿಥೇಯ ಘಟಕದ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಜೆಸಿ ರವಿಚಂದ್ರ ಪಾಟಾಲಿ ವಂದನಾರ್ಪಣೆ ಸಲ್ಲಿಸಿದರು ತರಬೇತಿ ಕಾರ್ಯಗಾರದಲ್ಲಿ ವಲಯ 15ರ ವಿವಿಧ ಘಟಕಗಳ 31 ಸದಸ್ಯರು ಭಾಗವಹಿಸಿದ್ದರು. ಜೆಸಿಐ ಕುಂದಾಪುರದ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here