ಆಧುನಿಕ ವಿದ್ಯೆಗಿಂತ ಆಧ್ಯಾತ್ಮಿಕ ವಿದ್ಯೆ ಅಧಿಕ

0
7

ಬೆಂಗಳೂರು ಬಸವನಗುಡಿ ಗೋವರ್ಧನದಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠ ಉದ್ಘಾಟಿಸುತ್ತ ಶ್ರೀ ಪುತ್ತಿಗೆ ಶ್ರೀಗಳು.

ಬೆಂಗಳೂರು : ಬೆಂಗಳೂರಿನ ಬಸವನಗುಡಿಯ ಶ್ರೀ ಗೋವರ್ಧನ ಕ್ಷೇತ್ರ – ಉಡುಪಿ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿದ್ಧ್ಯದಲ್ಲಿ ತ್ರಿಮತಸ್ಥ ವಿಪ್ರ ಸಮುದಾಯದ ಮಕ್ಕಳಿಗಾಗಿ “ಶ್ರೀ ಪುತ್ತಿಗೆ ಸುಗುಣ ಸ್ಕೂಲ್”, ಮಹಿಳೆಯರಿಗಾಗಿ “ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ” ಹಾಗೂ ಪುರುಷರಿಗಾಗಿ “ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ” ಉದ್ಘಾಟನೆಮಾಡುತ್ತಾ ಆಧ್ಯಾತ್ಮಿಕ ವಿದ್ಯೆಯ ಆಧಿಕ್ಯವನ್ನುಪ್ರತಿಪಾದಿಸಿದರು .

“ಇಂದಿನ ಜನತೆಯು ಹಿಂದೆಂದಿ ಗಿಂತಲೂ ಬಹಿರ್ಮುಖವಾಗುತ್ತಿದ್ದು ಆಂತರಿಕವಾಗಿ ಕುಂಠಿತ ವಾಗಿ ಕು ಬ್ಜವಾಗುತ್ತಿದೆ. ಜೀವನದ ಪರಿಪೂರ್ಣತೆಗೆ ಆಧ್ಯಾತ್ಮಿಕತೆಯೇ ಪೂರ್ಣಕುಂಭ ವೆನಿಸಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಆಧ್ಯಾತ್ಮಿಕತೆಗೆ ಅತಿಶಯತೆಯನ್ನು ನೀಡಲು ಈ ವಿದ್ಯಾಪೀಠಗಳು ಅತ್ಯಂತ ಅವಶ್ಯವೆನಿಸಿದೆ” ಎಂದು ಶ್ರೀ ಪುತ್ತಿಗೆ ಶ್ರೀಗಳು ಅಭಿಪ್ರಾಯಪಟ್ಟರು .

ಶ್ರೀ ಪುತ್ತಿಗೆ ವಿದ್ಯಾಪೀಠಗಳು ಚೆನ್ನೈ, ಕೋಲ್ಕತ್ತಾ ಉಡುಪಿ ಮೊದಲಾದೆಡೆ ಈಗಾಗಲೇ ಅತ್ಯುತ್ತಮ ಸೇವೆ ಸಲ್ಲಿಸುತ್ತ ಪ್ರಸಿದ್ಧವಾಗಿವೆ ಎಂದು ಅವರು ತಿಳಿಸಿದರು.

ಭಂಡಾರಕೇರಿ ಮಠದ ಪರಮ ಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀಮತಿ ಅಹಲ್ಯಾ ಶರ್ಮಾ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಅಸಗೋಡು ಜಯಸಿಂಹರವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು “ರಾಷ್ಟ್ರ ನಿರ್ಮಾಣದ ಮಹತ್ ಕಾರ್ಯವಾಗಬೇಕಾದರೆ ಸನಾತನ ಧರ್ಮದ ರೀತಿಯಲ್ಲಿ ಕುಟುಂಬ ನಿರ್ವಹಣೆ ಅತ್ಯಗತ್ಯ ಹಾಗೂ ಈ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ ಒಂದು ಕ್ರಾಂತಿಕಾರಿ ಚಿಂತನೆಯಾಗಿದೆ” ಎಂದು ಶ್ಲಾಘಿಸಿದರು. ಒಂದು ಅಂದಾಜಿನಲ್ಲಿ ಭವಿಷ್ಯದಲ್ಲಿ ಶೇಖಡ 40ರಷ್ಟು ಜನರು ವಿವಾಹ ವಿಮುಖರಾಗುವ ಆತಂಕ ತಲೆದೋರಿದ್ದು ಹಾಗೂ ಈ ನಿಟ್ಟಿನಲ್ಲಿ ಸಮಾಜ ಎಚ್ಛೆತ್ತು ಈಗಿಂದೀಗಲೇ ಕಾರ್ಯಪ್ರವೃತ್ತರಾಗಬೇಕೆಂದು ಶ್ರೀಮತಿ ಅಹಲ್ಯಾ ಶರ್ಮರವರು ಅಭಿಪ್ರಾಯಪಟ್ಟರು.

ಶ್ರೀಯುತ ಜಯಸಿಂಹ ಹಾಗೂ ಡಾ. ಕೆ.ಪಿ ಪುತ್ತೂರಾಯರು ಶ್ರೀ ಪುತ್ತಿಗೆ ಶ್ರೀಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. ಶ್ರೀ ಪುತ್ತಿಗೆ ವಿದ್ಯಾಪೀಠಕ್ಕೆ ಸೇರ ಬಯಸುವವರು ಬೆಂಗಳೂರು ಬಸವನಗುಡಿ ಗೋವರ್ಧನದ ಕಾರ್ಯಾಲಯವನ್ನು ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ : +91 9880491323: +91 97432 92161 +91 99451 00948.

LEAVE A REPLY

Please enter your comment!
Please enter your name here