ಇತಿಹಾಸದ ಆಧ್ಯಾತ್ಮಿಕ ಪರಂಪರೆ ಶ್ರೀ ಗಾಯತ್ರಿ ಪೂಜೆ- ವಾಸುದೇವ ಎಲ್. ರಾಯ್ಕರ್

0
4

ದಾವಣಗೆರೆ : ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಎಲ್. ರಾಯ್ಕರ್ ಮಾತನಾಡಿ, ಕಳೆದ 26 ವರ್ಷಗಳಿಂದ ಪ್ರತೀ ಹುಣ್ಣಿಮೆಗೆ ನಿರಂತರವಾಗಿ ಕಠಿಣ ಪರಿಶ್ರಮದಿಂದ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ಈ ತಿಂಗಳು ಗೌರಿ ಹುಣ್ಣಿಮೆಯ ಪ್ರಯುಕ್ತ ನಡೆದಂತಹ ಶ್ರೀ ಗಾಯತ್ರಿ ಸಾಮೂಹಿಕ ಪೂಜೆ ಉಪಾಸನೆ ಐತಿಹಾಸಿಕ ಆಧ್ಮಾತ್ಮಿಕ ಪರಂಪರೆ ಶ್ರೀ ಗಾಯತ್ರಿ ಪರಿವಾರ ಎಂದರು.

ಈ ಗೌರಿ ಹುಣ್ಣಿಮೆಯ ಪೂಜೆಯ ಸೇವೆ ಡಾ|| ಸುಶೀಲಮ್ಮ ನೆರವೇರಿಸಿದರು. ಗಾಯಿತ್ರಿ ಪರಿವಾರದ ಗೌರವ ಅಧ್ಯಕ್ಷರಾದ ಡಾ|| ರಮೇಶ್ ಪಾಟೀಲ್, ಗಾಯಿತ್ರಿ ಪರಿವಾರದ ಸಂಚಾಲಕರಾದ ಭಾವನ್ನಾರಾಯಣ, ಸತೀಶ್ ಆರ್.ಎಂ., ಶಿವಕುಮಾರಸ್ವಾಮಿ, ಬಿ.ಸತ್ಯನಾರಾಯಣಮೂರ್ತಿ, ವಿ.ಕೃಷ್ಣಮೂರ್ತಿ, ಮಾಲತೇಶ್ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ಯವರು ಶ್ರೀ ಗಾಯತ್ರಿ ಮಂತ್ರದೊಂದಿಗೆ ಪ್ರಾರ್ಥನೆ ಮಾಡಿ, ಸ್ವಾಗತಿಸಿ ಅಚ್ಚುಕಟ್ಟಾಗಿ ನಿರೂಪಿಸಿ ಕೊನೆಗೆ ವಂದಿಸಿದರು.