ಕ್ರೀಡಾ ಭಾರತಿ ಉಡುಪಿ ಜಿಲ್ಲೆ : ವಿಭಿನ್ನ ರಾಷ್ಟ್ರೀಯ ಕ್ರೀಡಾ ದಿನಾಚರಣೆ

0
113


ಕ್ರೀಡಾ ಭಾರತಿ ಉಡುಪಿ ಜಿಲ್ಲಾ ಘಟಕ, ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಸಹಕಾರದೊಂದಿಗೆ ಪ್ರತಿ ತಾಲೂಕಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಿರಿಯ ಶಿಕ್ಷಕರನ್ನು ಅವರ ಮನೆಗೆ ತೆರಳಿ ಗೌರವಿಸುವ ಮೂಲಕ ವಿಶಿಷ್ಟವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು. ಉಡುಪಿ ತಾಲೂಕಿನ ಐ. ಕೃಷ್ಣ ಹೆಗ್ಡೆ, ಕಾಪು ತಾಲೂಕಿನ ಎಂ.ರವೀಂದ್ರ ಶೆಟ್ಟಿ, ಬ್ರಹ್ಮಾವರ ತಾಲೂಕಿನ ಲಕ್ಷ್ಮಣ ಭಂಡಾರಿ , ಬೈಂದೂರು ತಾಲೂಕಿನ ಕೃಷ್ಣಪ್ಪ ಶೆಟ್ಟಿ , ಹೆಬ್ರಿ ತಾಲೂಕಿನ ಭೋಜ ಶೆಟ್ಟಿ, ಕುಂದಾಪುರ ತಾಲೂಕಿನ ರತ್ನಾಕರ ಶೆಟ್ಟಿ ರಟ್ಟಾಡಿ , ಕಾರ್ಕಳ ತಾಲೂಕಿನ ವಾಸುದೇವ ಭಟ್ ಇವರನ್ನು ಅವರ ಸ್ವಗ್ರಹ ದಲ್ಲಿ ಸನ್ಮಾನಿಸಿ ಗೌರವಿಸಿ ಅವರ ಆಶೀರ್ವಾದವನ್ನು ಪಡೆಯಲಾಯಿತು . ಕ್ರೀಡಾ ಭಾರತೀಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಸನ್ನ ಶೆಣೈ , ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ, ಬೈಲೂರು, ಕಾರ್ಯದರ್ಶಿ ಪ್ರಕಾಶ್ ರಾವ್ ಜೊತೆ ಕಾರ್ಯದರ್ಶಿ ಗಣಪಯ್ಯ , ವಿಭಾಗ ಸಹ ಸಂಯೋಜಕ ಲಿಂಗಯ್ಯ , ಹೆಬ್ರಿ ಕ್ರೀಡಾ ಭಾರತಿ ತಾಲೂಕು ಘಟಕದ ಅಧ್ಯಕ್ಷರಾದ ಸೀತಾನದಿ ವಿಠಲ್ ಶೆಟ್ಟಿ, ಕಾರ್ಯದರ್ಶಿ, ವಿಜಯ್ ಕುಮಾರ್ ಶೆಟ್ಟಿ , ಕೇಶವ್ ಬೈಂದೂರು ಹಾಗೂ ಸನ್ಮಾನಿತರ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here