ಕಿರಿಮಂಜೇಶ್ವರದ ಶ್ರೀ ಅಗಸ್ತ್ಯೇಶ್ವರ , ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಮನ್ಮಹಾರಥೋತ್ಸವು ಸಂಭ್ರಮದಲ್ಲಿ ನಡೆಯಿತು.
ರಥೋತ್ಸವ ಪ್ರಯುಕ್ತ ಸಾನಿಧ್ಯದಲ್ಲಿ ಬೆಳಿಗ್ಗೆ ಬುದ್ಧ ಪೂರ್ಣೆಮಾ, ಪೂರ್ವಾಹ್ನ ನಿತ್ಯಬಲಿ, ಅಧಿವಾಸ ಹೋಮ, ರಥ ಶುದ್ಧಿ, ರಥ ಬಲಿ ಪೂರ್ವಾಹ್ನ 10ಕ್ಕೆ ರಥಾರೋಹಣ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಶ್ರೀಮನ್ಮಹಾರಥೋತ್ಸವ ಸಡಗರ ಸಂಭ್ರಮದಲ್ಲಿ ನಡೆಯಿತು.
ರಥೋತ್ಸವಕ್ಕೆ ವಿವಿಧ ರಾಜ್ಯಗಳಿಂದ ವಿವಿಧ ಜಿಲ್ಲೆಗಳಿಂದ ವಿದೇಶದಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ದೇವಸ್ಥಾನ ಸುತ್ತಲೂ ಮತ್ತು ರಥ ಬೀದಿ ಸುತ್ತಲೂ ಹೂವಿನ ಅಲಂಕಾರ ವಿದ್ಯುತ್ ದೀಪ ಅಲಂಕಾರ
ಮತ್ತು ವಿವಿಧ ವೇಷ ಭೂಷಣಗಳು ವಾದ್ಯಗೋಷ್ಠಿಗಳು ಚಂಡೆ ವಾದನ ರಥೋತ್ಸವಕ್ಕೆ ಇನ್ನಷ್ಟು ಅದ್ದೂರಿಗೆ ಸಾಕ್ಷಿಯಾಯ್ತು
ಇಂದು ಪ್ರಭೋಧೋತ್ಸವ ವಸಂತೋತ್ಸವ, ರಾತ್ರಿ 8ಕ್ಕೆ ಚೂರ್ಣೋತ್ಸವ (ಓಕುಳಿ) ಮೃಗಯಾವಿಹಾರ, ಅವಾಭ್ರತ ಸ್ನಾನ, ವರುಣ ಹೋಮ,14ರಂದು ಪೂರ್ಣಾಹುತಿ, ಧ್ವಜಾವರೋಹಣ ನಡೆಯಲಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಶಾಸಕ ಗುರುರಾಜ್ ಗಂಟೆಹೊಳೆ,ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ,ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿ, ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು ,ಜನಪ್ರತಿನಿಧಿಗಳು ಸಮಿತಿ ಸದಸ್ಯರಾದ ರಾಮಕೃಷ್ಣಭಟ್ ,ಎನ್. ವಿ ಪ್ರಕಾಶ್ ಐತಾಳ್ , ಪಂಜು ಎಂ. ಕುಂದರ್, ಈಶ್ವರ, ಆನಂದ ದೇವಾಡಿಗ ರವಿರಾಜ್ ಪೂಜಾರಿ, ಶ್ರೀಮತಿ ಸುಮಂಗಲ ಕಾರಂತ್,ಶ್ರೀಮತಿ ನೇತ್ರಾವತಿ ಖಾರ್ವಿ ಹಾಗೂ ತಂತ್ರಿಗಳು, ಅರ್ಚಕವೃಂದ, ಉಪಾದಿವಂತರು, ಸಿಬ್ಬಂದಿವರ್ಗ, ವಾದ್ಯವೃಂದ ಹಾಗೂ ಊರ ಹತ್ತು ಸಮಸ್ತರ ಉಪಸ್ಥಿತರಿದ್ದರು.