Saturday, June 14, 2025
HomeUncategorizedನರಿಮೊಗರು ಗ್ರಾಮದ ಅಳಕ್ಕೆ ತರವಾಡು ಮನೆಯ ಗೃಹಪ್ರವೇಶ ಧರ್ಮ ದೈವ ಧೂಮಾವತಿ ಬಂಟದೈವ ಹಾಗೂ ಪರಿವಾರ...

ನರಿಮೊಗರು ಗ್ರಾಮದ ಅಳಕ್ಕೆ ತರವಾಡು ಮನೆಯ ಗೃಹಪ್ರವೇಶ ಧರ್ಮ ದೈವ ಧೂಮಾವತಿ ಬಂಟದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾಕಲಶ ಹಾಗೂ ನೇಮೋತ್ಸವ


.ಶತಮಾನಗಳ ಇತಿಹಾಸ ಇರುವ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಅಳಕ್ಕೆ ಎಂಬಲ್ಲಿ ಕುಟುಂಬಸ್ಥರು ಸೇರಿ ನೂತನವಾಗಿ ನಿರ್ಮಿಸಿರುವ ತರವಾಡು ಮನೆಯ ಗೃಹ ಪ್ರವೇಶ, ಧರ್ಮ ದೈವ ಧೂಮಾವತಿ ಬಂಟ ದೈವ ಹಾಗೂ ಕಲ್ಲುರ್ಟಿ, ಕುಪ್ಪೆಪಂಜುರ್ಲಿ, ವರ್ಣರ ಪಂಜುರ್ಲಿ ಹಾಗೂ ಗುಳಿಗ ದೈವ ಸೇರಿದ ಪರಿವಾರ ದೈವಗಳ ನೇಮೋತ್ಸವ, ವೇ. ಮೂ. ಬ್ರಹ್ಮ ಶ್ರೀ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೇ. ಮೂ. ಕರಿಯಡ್ಕ ಶ್ರೀ ಬಾಲಚಂದ್ರ ಭಟ್ ಇವರ ಉಪಸ್ಥಿತಿಯಲ್ಲಿ ದೇವತಾ ಪ್ರಾರ್ಥನೆ, ವಾಸ್ತುಹೋಮ, ಮಹಾಗಣಪತಿ ಹೋಮ, ಕಲಶಪೂಜೆ, ದೇವ ಪ್ರತಿಷ್ಠೆ, ಶ್ರೀ ಸತ್ಯನಾರಾಯಣ ಪೂಜೆ, ಸ್ಥಳದ ರಕ್ತೇಶ್ವರಿ ಮತ್ತು ಪರಿವಾರ ದೈವಗಳಿಗೆ ತಂಬಿಲ, ಮುಡಿಪು ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.

ಮೇ. 10ರಿಂದ ಮೇ. 12ರ ತನಕ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲಿ ಕುಟುಂಬಸ್ಥರು ಬಂಧುಗಳು ಹಾಗೂ ಊರ-ಪರವೂರ ಭಕ್ತಾಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೈವದೇವರ ನರ್ತನ ಸೇವೆ ಹಾಗೂ ಗಂಧಪ್ರಸಾದ ಸ್ವೀಕರಿಸುವುದರೊಂದಿಗೆ ಅನ್ನಸಂತರ್ಪಣೆಯಲ್ಲೂ ಪಾಲ್ಗೊಂಡರು. ಕುಟುಂಬದ ಯಜಮಾನರು ಬಂಬಿಲ ಬರಮೇಲು ರಾಮಣ್ಣ ರೈ, ಅಳಕೆ ಕೋಚಣ್ಣ ರೈ ಹಾಗೂ ಕುಟುಂಬಸ್ಥರು ಬಂಟ ಬಂಗೇರ ಅಳಕ್ಕೆ ತರವಾಡು ಮನೆಯಪರವಾಗಿ ಎಲ್ಲರನ್ನೂ ಸ್ವಾಗತಿಸಿ ಯಥೋಪಚಾರ ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಪುತ್ತೂರು ದೈವಗಳ ಮಧ್ಯಸ್ಥರಾಗಿ ನೇಮೋತ್ಸವವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.
-ನಾರಾಯಣ ರೈ ಕುಕ್ಕುವಳ್ಳಿ

RELATED ARTICLES
- Advertisment -
Google search engine

Most Popular