ಮಾ.17ರಂದು ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ಬ್ರಹ್ಮ ಬೈದರ್ಕಳ ಹಾಗೂ ಚಿಕ್ಕಮ್ಮ ದೇವಿ ಗರೋಡಿ ಉಪ್ಪೂರು ಪಿಳ್ಕಳ-ಉಡುಪಿ ಕಾಲಾವಧಿ ನೇಮೋತ್ಸವ ಮಾ.17ರಂದು ನಡೆಯಲಿದೆ.

ದಿನಾಂಕ 16-03-2026 ನೇ ಸೋಮವಾರ ಬೆಳಿಗ್ಗೆ ಗಂಟೆ 6.00 ಕ್ಕೆ ಅನ್ನ ನೈವೇದ್ಯದ ಹಸಿರು ವಾಣಿ ಗರೋಡಿ ಪ್ರವೇಶ,ರಾತ್ರಿ 7:30 ರಿಂದ ಅಗಲು ನೈವೇದ್ಯ ಅಗೆಲು ಸೇವೆ ನಡೆಯಲಿದೆ.
ದಿನಾಂಕ 17-03-2026 ನೇ ಮಂಗಳವಾರ ಮಧ್ಯಾಹ್ನ 12:30 ರಿಂದ ಅನ್ನ ಸಂತರ್ಪಣೆ,ರಾತ್ರಿ ಗಂಟೆ 7ರಿಂದ ನೇಮೋತ್ಸವ ಪ್ರಾರಂಭ ರಾತ್ರಿ 12:30 ರಿಂದ ಬೈದೇರುಗಳ ದರ್ಶನ ಸೇವೆ
ತದನಂತರ ಚಿಕ್ಕಮ್ಮ ದೇವಿಯ ದರ್ಶನ ಸೇವೆ ಮತ್ತು ಮಾಯಂದಲ ಕೋಲ ನಡೆಯಲಿರುವುದು.

ದಿನಾಂಕ 18-03-2026 ನೇ ಬುಧವಾರ 11.00 ಗಂಟೆಗೆ ಮುಂಡಿಗೆ ಪೂಜೆ ಈ ಒಂದು ಪುಣ್ಯದ ಕಾರ್ಯದಲ್ಲಿ ಸರ್ವರಿಗೂ ಆದರ ಸ್ವಾಗತ ಬಯಸುವ ಆಡಳಿತ ಮಂಡಳಿ ಹಾಗೂ ಊರಿನ ಹತ್ತು ಸಮಸ್ತರು.
ನೇಮೋತ್ಸವದ ನೇರ ಪ್ರಸಾರವನ್ನು ನಮ್ಮ ಉಡುಪಿ ಟಿವಿ ವಾಹಿನಿಯಲ್ಲಿ ನೋಡಬಹುದು.
ವರದಿ ವಿನೋದ್ ಶೆಟ್ಟಿ

