ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ನೂತನ “ಶ್ರೀ ಗಿಲ್ಕಿಂಜತ್ತಾಯ ಮಹಾದ್ವಾರ” ಲೋಕಾರ್ಪಣ ಕಾರ್ಯಕ್ರಮ

0
159

ಬಂಟ್ವಾಳ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಏಪ್ರಿಲ್ 7 ಮತ್ತು 8 ರಂದು ಜರಗಿತು.

ಈ ಸಂದರ್ಭದಲ್ಲಿ ಶ್ರೀ ಗಿಲ್ಕಿಂಜತ್ತಾಯ ಉತ್ಸವ ಸಮಿತಿ ವತಿಯಿಂದ ನಿರ್ಮಿಸಲ್ಪಟ್ಟ ” ಶ್ರೀ ಗಿಲ್ಕಿಂಜತ್ತಾಯ ಮಹಾದ್ವಾರವನ್ನು ದೇವಸ್ಥಾನದ ಪ್ರಧಾನ ಅರ್ಚಕರು ಲೋಕಾರ್ಪಣೆ ಮಾಡಿದರು.

ನಂತರ ದೈವದ ಬಂಡಾರವೇರಿ ಕಂಬಳ ವಲಸರಿ ಜರಗಿತು.


ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ ಕಾರ್ಯಕ್ರಮ ನಡೆಯಿತು.
ದೈವದ ಚಾಕರಿದರಾದ ಶ್ರೀ ಚಿಕ್ಕು ಪೂಜಾರಿ ಮೈರಾ, ಪೂವಪ್ಪ ಮಡಿವಾಳ, ದೈವ ನರ್ತಕ ಶೇಖರ ಪಂಬದ ರವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬಾಲ ಪ್ರತಿಭೆ ಸ್ವರ ಸುಳ್ಯ,ಭರತನಾಟ್ಯ ಶಿಕ್ಷಕಿ ಚೈತ್ರ ಮಂಗಳೂರು, ಹಾಗೂ ಲಯನ್ ಕಿಶೋರ್ ಡಿ ಶೆಟ್ಟಿ ರವರನ್ನು ಗೌರವಿಸಲಾಯಿತು.

ಬಳಿಕ ಶ್ರೀ ಲಲಿತೆ ಕಲಾವಿದರು(ರಿ.) ಮಂಗಳೂರು ಇವರಿಂದ “ಶನಿ ಮಹಾತ್ಮೆ” ಎನ್ನುವ ತುಳು ಪೌರಾಣಿಕ ನಾಟಕ ನ ಜರಗಿತು.

ದಿನಾಂಕ 8-4-2025 ನೇ ಮಂಗಳವಾರ ಬೆಳಿಗ್ಗೆ ದೈವಕ್ಕೆ ಬೆಳ್ಳಿ ಕವಚದ ಮೊಗ ಒಪ್ಪಿಸಲಾಯಿತು ನಂತರ ಹರಕೆನೆ ಮಹೋತ್ಸವ ಜರಗಿತು. ಮಧ್ಯಾಹ್ನ ಯುವಶಕ್ತಿ ಫ್ರೆಂಡ್ಸ್ ವೀರಕಂಬ ವತಿಯಿಂದ ಸಾರ್ವಜನಿಕ ಅನ್ನದಾನ ಸೇವೆ ನಡೆಲಿದ್ದು, ಸಂಜೆ 6 ಗಂಟೆಗೆ ಕಲ್ಲುರ್ಟಿ, ಕಲ್ಕೂಡ, ಕೊರತಿ, ಕೊರಗಜ್ಜ ದೈವದ ಕೋಲೋತ್ಸವ, ಬಳಿಕ ದೈವದ ಕುಕ್ಕಿಕಟ್ಟೆ ಒಳಸರಿ ಜರಗಿತು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here