ನಿರಂತರ ಅಧ್ಯಯನ ಮತ್ತು ಆಸಕ್ತಿಯು ಸಂಶೋಧನೆಗೆ ಪ್ರೇರಣೆ : ಡಾ. ಸುಮಿತಾ ಆಚಾರ್
ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಆಸಕ್ತಿಯಿಂದ ಕಲಿಕೆಯನ್ನು ಮೈಗೂಡಿಸಿಕೊಂಡಾಗ ಅದು ಸಂಶೋಧನೆಗೆ ಪ್ರೇರಣೆಯಾಗುತ್ತದೆ ಎಂದು ಸಂತ ಆಲೋಷಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಸಹ ಪ್ರಾಧ್ಯಾಪಕರಾದ ಡಾ. ಸುಮಿತಾ ಆಚಾರ್ ನುಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಅಧ್ಯಯನ ವಿಭಾಗವು ಆಯೋಜಿಸಿದ ಪ್ರಾಜೆಕ್ಟ್ ಕಾರ್ಯಕ್ಕೆ ಸಂಶೋಧನಾ ಕೌಶಲ್ಯಗಳ ಕುರಿತ ವಿಶೇಷ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪ್ರಾಜೆಕ್ಟ್ ಕಾರ್ಯ ತಯಾರಿಕೆಗೆ ಯೋಜನಾ ಬದ್ಧವಾಗಿ ಸಂಶೋಧನಾ ಕಲೆಯನ್ನು ಹೆಚ್ಚಿಸಿಕೊಳ್ಳಬೇಕು ಮುಖ್ಯವಾಗಿ ಇವತ್ತು ಕಠಿಣ ಶ್ರಮದೊಂದಿಗೆ ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಣೆಯು ಬಹಳ ಅಗತ್ಯವಾಗಿದೆ. ಹಾಗೂ ವೇಗವಾಗಿ ಬೆಳೆಯುವ ತಂತ್ರಜ್ಞಾನದೊಂದಿಗೆ ನಾವು ತಯಾರಿಗೊಳ್ಳಬೇಕು ಮತ್ತು ನೂತನ ಅಪ್ಲಿಕೇಶನ್ ಗಳು ಕಡಿಮೆ ಸಮಯದಲ್ಲಿ ಕೆಲಸವನ್ನು ಅಂತಿಮಗೊಳಿಸುತ್ತದೆ ಆದರೆ ತಂತ್ರಜ್ಞಾನವನ್ನು ಉಪಯೋಗಿಸುವಾಗ ನಾವು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದರು ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರಾಜೆಕ್ಟ್ ಕಾರ್ಯಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ಸ್ಟಾಫ್ ಕೋ-ಆರ್ಡಿನೇಟರ್ ಗುರುರಾಜ್ ಪಿ. ಮತ್ತು ವೈಶಾಲಿ ಕೆ. ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಹಾಗೂ ಎಂ.ಕಾಂ ಮತ್ತು ಎಚ್. ಆರ್. ಡಿ. ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿಗಳಾದ ಶಿವರಂಜನಿ ಸಿ. ಸ್ವಾಗತಿಸಿದರೆ, ನಿಖಿಲ್ ಜಿ. ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಫಾತಿಮಾ ಸಬ್ನಮ್ ನಿರ್ವಹಿಸಿದರು.