ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಶ್ರೀ ಕೃಷ್ಣ ಲೀಲೋತ್ಸವ‌

0
21

ಅಜೆಕಾರು : ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಸಭಾಂಗಣದಲ್ಲಿ, ಶ್ರೀ ಮಠದ ಪ್ರಧಾನ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ ಇವರ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 23ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವವು ನಡೆಯಿತು.

ದೇವರಿಗೆ ಹೂವಿನ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ಶ್ರೀ ಕೃಷ್ಣ ಲೀಲೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆ, ಸ್ಥಳೀಯ ಮಕ್ಕಳ ಕೃಷ್ಣ ವೇಷ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ ನಡೆಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಆರ್ ಭಟ್ ವರಂಗ ಹಾಗೂ ಶಂಕರ ಶೆಟ್ಟಿ ಎಳ್ಳಾರೆ ಮತ್ತು ಕಾರ್ಯಕ್ರಮಕ್ಕೆ ನಿರಂತರ ಶ್ರಮಿಸುತ್ತಿರುವ ಕಾಡುಹೊಳೆ ಗುಣಪಾಲ ನಾಯ್ಕ, ಗಣೇಶ ನಾಯಕ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮಠದ ಅರ್ಚಕ ರಾಘವೇಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಂಗಮೇಶ್ವರ ಮಠದ ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ ಹಾಗೂ ಸನ್ಮಾನಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಮಕ್ಕಳಿಂದ ನೃತ್ಯ ರೂಪಕ, ಕಡಂದಲೆ ಶ್ರೀಶ ಭಟ್ ತಂಡದವರಿಂದ ಸಂಗೀತ ಕಛೇರಿ, ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಡಂದಲೆ ಶ್ರೀಶದಾಸ ಭಟ್ ಪ್ರಾರ್ಥಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಜ್ಯೋತಿ ಹರೀಶ್ ಸ್ವಾಗತಿಸಿದರು. ಉದಯ ಪ್ರಭು ಮತ್ತು ಅನುಷಾ ನಾಯಕ್ ಕಾಡುಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮುನಿಯಾಲು, ಅಜೆಕಾರು ಪರಿಸರದ ಹಲವಾರು ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.