ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ : ಯುವಕ ಮಂಡಳಿಯ ಆಶ್ರಯದಲ್ಲಿ ವಸಂತಪೂಜೆ

0
187

ಉಡುಪಿ  ಜೂ 04  :  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ, ಶತಮಾನೋತ್ತರ ರಜತ ಮಹೋತ್ಸವ  125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಪರ್ವ ಕಾಲದಲ್ಲಿ  ಇತ್ತೀಚಿಗೆ  ಜಿ  ಎಸ್ ಬಿ  ಯುವಕ ಮಂಡಳಿಯ  ಆಶ್ರಯದಲ್ಲಿ ಕೊನೆಯ ವಸಂತಪೂಜೆ ವೈಭವದಿಂದ  ನೆರವೇರಿತು. ನೂತನ ರಜತ ಪೀಠದ   “ಬೆಳ್ಳಿಯ ಶೇಷ ವಾಹನ ದಲ್ಲಿ  ಶ್ರೀದೇವರಿಗೆ ಮಹಾಪೂಜೆ ನೆಡೆಯಿತು. ವಿವಿಧ ಮಂಗಳವಾದ್ಯ ದೊಂದಿಗೆ   ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ  ಜರಗಿತು.                                                                                                                                                ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್, ದಯಾಘಾನ್ ಭಟ್ ಚೇ೦ಪಿ ರಾಮಚಂದ್ರ ಭಟ್  ,  ದೇವಳದ ಮುಕ್ತೇಸರ ಪಿ ವಿ ಶೆಣೈ, ದೇವಳದ ಭಜನಾ ಮಂಡಳಿಯ  ಅಧ್ಯಕ್ಷ  ಮಟ್ಟಾರ್ ಸತೀಶ್ ಕಿಣಿ  , ಜಿ  ಎಸ್,  ಬಿ ಯುವಕ ಅಧ್ಯಕ್ಷ  ನಿತೇಶ್ ಶೆಣೈ, ನರಹರಿ ಪೈ, ಭಾಸ್ಕರ ಶೆಣೈ, ಸಂದೀಪ  ನಾಯಕ್ ,  ವಿಶಾಲ್ ಶೆಣೈ  ಹಾಗೂ ಆಡಳಿತ ಮಂಡಳಿಯ ಸದಸ್ಯರು  ,  ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ  ಎಸ್,  ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.                                                     

LEAVE A REPLY

Please enter your comment!
Please enter your name here